13 ಅಡಿಯ ಮೊಸಳೆಯೊಂದು ಆರು ಸಾವಿರ ವರ್ಷಗಳಷ್ಟು ಹಳೆಯ ಕಲಾಕೃತಿಯನ್ನು ತಿಂದಿರುವುದನ್ನು ಕಂಡ ಬೇಟೆಗಾರನೊಬ್ಬ ದಿಗ್ಭ್ರಾಂತನಾಗಿದ್ದಾನೆ.
ಮೊಸಳೆಯ ಹೊಟ್ಟೆಯನ್ನು ಕತ್ತರಿಸಿದ ಬಳಿಕ ಶೇನ್ ಸ್ಮಿತ್, ಮೊಸಳೆಯ ಹೊಟ್ಟೆಯೊಳಗೆ 336 ಕಿಲೋಗ್ರಾಂಗಳಷ್ಟು ತೂಕದ ಪುರಾತನ ಬಾಣದ ಗುರುತು ಕಂಡುಕೊಂಡಿದ್ದಾನೆ.
ದೈತ್ಯ ಪ್ರಾಣಿಯು ತನ್ನ ಮೇಲೆ ಹೊಡೆದ ಬಾಣವನ್ನು ತಿಂದಿರಬಹುದು ಎಂದು ಶೇನ್ ಆರಂಭದಲ್ಲಿ ಭಾವಿಸಿದ್ದ. ಈ ಚಿತ್ರಗಳನ್ನು ಅಧ್ಯಯನ ಮಾಡಿದ ಮಿಸ್ಸಿಸ್ಸಿಪ್ಪಿ ರಾಜ್ಯದ ಭೂವಿಜ್ಞಾನಿ, ಇದು ಸುಮಾರು 5,000 ರಿಂದ 6,000 ವರ್ಷಗಳಷ್ಟು ಹಳೆಯದು ಎಂದು ಕಂಡುಕೊಂಡಿದ್ದಾರೆ.
BIG BREAKING: ಎಲ್ಲಾ ಮಾದರಿ ಕ್ರಿಕೆಟ್ ಗೆ ದಾಖಲೆ ವೀರ ಲಸಿತ್ ಮಾಲಿಂಗ ಗುಡ್ ಬೈ
“ನಾವು ಅದರ ಹೊಟ್ಟೆಯಲ್ಲಿ ಏನಿದೆ ಎಂಬುದನ್ನು ನೋಡಲು ಕೆಲವು ದೊಡ್ಡ ಮೊಸಳೆಗಳ ದೇಹ ಕತ್ತರಿಸುತ್ತಿದ್ದೆವು. ಇಲ್ಲಿಯವರೆಗೆ ಪ್ರತಿಯೊಂದು ಮೊಸಳೆಯೂ ಅದರಲ್ಲಿ ಏನನ್ನಾದರೂ ಹೊಂದಿರುತ್ತಿದ್ದವು. ಆದರೆ, ಈ 13 ಅಡಿ ಉದ್ದದ ಮೊಸಳೆಯು ಈ ಪುರಾತನ ಬಾಣ ನುಂಗಿರುವುದನ್ನು ನೋಡಿ ಆಘಾತವಾಯಿತು” ಎಂದು ಶೇನ್ ಹೇಳಿದ್ದಾರೆ.
ಇತಿಹಾಸಕಾರರ ಪ್ರಕಾರ, ಮುರಿದ ಬಾಣವು ಪುರಾತನ ಕಾಲದಲ್ಲಿ ಸ್ಥಳೀಯ ಅಮೆರಿಕನ್ನರು ಬಳಸಿದ ಮೀನುಗಾರಿಕೆ ತೂಕದ ವಿಧಗಳಾಗಿವೆ ಎಂದು ಅಂದಾಜಿಸಿದ್ದಾರೆ.