alex Certify BIG NEWS: ಮುಂಬೈ ಪೊಲೀಸರಿಗೆ ಕರೆ ಮಾಡಿ 26/11 ದಾಳಿ ಮರುಕಳಿಸಲಿದೆ ಎಂದು ಬೆದರಿಕೆ; ಪಾಕಿಸ್ತಾನದಿಂದ ಫೋನ್ ಬಂದಿರುವ ಹಿನ್ನೆಲೆಯಲ್ಲಿ ಹೈ ಅಲರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಂಬೈ ಪೊಲೀಸರಿಗೆ ಕರೆ ಮಾಡಿ 26/11 ದಾಳಿ ಮರುಕಳಿಸಲಿದೆ ಎಂದು ಬೆದರಿಕೆ; ಪಾಕಿಸ್ತಾನದಿಂದ ಫೋನ್ ಬಂದಿರುವ ಹಿನ್ನೆಲೆಯಲ್ಲಿ ಹೈ ಅಲರ್ಟ್

ಪಾಕಿಸ್ತಾನದ ಫೋನ್ ಸಂಖ್ಯೆಯಿಂದ ಮುಂಬೈ ಪೊಲೀಸರಿಗೆ ಕರೆ ಮಾಡಿರುವ ವ್ಯಕ್ತಿ 26/11 ದಾಳಿ ಪ್ರಕರಣ ಮರುಕಳಿಸಲಿದೆ ಎಂದು ಬೆದರಿಕೆ ಹಾಕಿರುವುದಲ್ಲದೆ, ಉದಯಪುರದ ಟೈಲರ್ ಕೊಲೆ ನಡೆದಂತೆ ಮತ್ತಷ್ಟು ಹತ್ಯೆಗಳು ನಡೆಯಲಿವೆ ಎಂದಿದ್ದಾನೆ.

ಮುಂಬೈ ಟ್ರಾಫಿಕ್ ಕಂಟ್ರೋಲ್ ಗೆ ವಾಟ್ಸಪ್ ನಂಬರ್ ಮೂಲಕ ಈ ಕರೆ ಬಂದಿದೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಬೈ ನಗರದಾದ್ಯಂತ ಎಚ್ಚರಿಕೆ ವಹಿಸಲಾಗಿದೆ.

ಆರು ಮಂದಿ ಈಗಾಗಲೇ ಭಾರತಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ದಾಳಿ ಮಾಡಲಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ಬೆದರಿಕೆ ಒಡ್ಡಿದ್ದಾನೆ. ಈ ಬೆದರಿಕೆ ಕರೆ ಹಿಂದಿನ ಸತ್ಯಾಸತ್ಯತೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...