alex Certify ತಲೆ ಮೇಲೆ 735 ಮೊಟ್ಟೆ ಹೊತ್ತು ದಾಖಲೆ ನಿರ್ಮಿಸಿದ ಬೆನಿನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ಮೇಲೆ 735 ಮೊಟ್ಟೆ ಹೊತ್ತು ದಾಖಲೆ ನಿರ್ಮಿಸಿದ ಬೆನಿನ್

ಅಂಗಡಿಯಿಂದ ಡಜ಼ನ್ ಮೊಟ್ಟೆ ಖರೀದಿಸಿ ಒಂದೇ ಒಂದು ಮೊಟ್ಟೆ ಒಡೆಯದಂತೆ ಮನೆಗೆ ಕೊಂಡೊಯ್ಯುವಷ್ಟರಲ್ಲೇ ಏನೋ ಸಾಧಿಸಿದಂತೆ ಅನಿಸುತ್ತದೆ.

ಅಂಥದ್ದರಲ್ಲಿ, ಪಶ್ಚಿಮ ಆಫ್ರಿಕಾದ ಬೆನಿನ್ ದೇಶದ ಗ್ರೆಗರಿ ಡ ಸಿಲ್ವಾ ಹೆಸರಿನ ಈತ ತನ್ನ ಹ್ಯಾಟ್ ಮೇಲೆ 735 ಮೊಟ್ಟೆಗಳನ್ನು ಹೊತ್ತೊಯ್ದು ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ.

ಅವಳಿ ಮಕ್ಕಳೊಂದಿಗೆ ತಾಯಿ ಫೋಸ್: ವಿಡಿಯೋ ನೋಡಿ ನೆಟ್ಟಿಗರು ಶಾಕ್

ಈತನ ದಾಖಲೆಯ ವಿಡಿಯೋವನ್ನು ಗಿನ್ನಿಸ್ ವಿಶ್ವ ದಾಖಲೆಗಳ ಅಧಿಕೃತ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಇನ್‌ಸ್ಟಾಗ್ರಾಂನಲ್ಲಿರುವ ತನ್ನ ಹ್ಯಾಂಡಲ್ ಮೂಲಕ ಈ ವಿಡಿಯೋ ಪೋಸ್ಟ್‌ ಮಾಡಿರುವ ಗಿನ್ನೆಸ್ ವಿಶ್ವ ದಾಖಲೆ, “ಒಂದೇ ಹ್ಯಾಟ್ ಮೇಲೆ ಅತ್ಯಂತ ಹೆಚ್ಚು ಮೊಟ್ಟೆ ಹೊತ್ತಿರುವ ದಾಖಲೆಯನ್ನು 735 ಮೊಟ್ಟೆಗಳನ್ನು ಹೊತ್ತ ಗ್ರೆಗರಿ ಡ ಸಿಲ್ವಾ ನಿರ್ಮಿಸಿದ್ದಾರೆ,” ಎಂದು ಕ್ಯಾಪ್ಷನ್ ನೀಡಲಾಗಿದೆ.

ಗ್ರಗರಿಯ ಈ ಅದ್ಭುತ ಟ್ಯಾಲೆಂಟ್‌ನ ವಿಡಿಯೋ ಭಾರೀ ವೈರಲ್ ಆಗಿದೆ.

https://www.youtube.com/shorts/14qrZyxgLcQ?feature=share

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...