alex Certify ಅವಳಿ ಮಕ್ಕಳೊಂದಿಗೆ ತಾಯಿ ಫೋಸ್: ವಿಡಿಯೋ ನೋಡಿ ನೆಟ್ಟಿಗರು ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಮಕ್ಕಳೊಂದಿಗೆ ತಾಯಿ ಫೋಸ್: ವಿಡಿಯೋ ನೋಡಿ ನೆಟ್ಟಿಗರು ಶಾಕ್

ಮಹಿಳೆಯೊಬ್ಬಳು ತನ್ನ ಅವಳಿ ಹೆಣ್ಣುಮಕ್ಕಳೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಆಕೆಯ ಮಕ್ಕಳೆಂದು ನಂಬಲು ಸಾಧ್ಯವಿಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಆಕೆ ನೋಡಲು ಸಣ್ಣ ಇದ್ದರೂ ಮಕ್ಕಳು ಮಾತ್ರ ಗಾತ್ರದಲ್ಲಿ ದಪ್ಪ ಇದ್ದಾರೆ.

ಅಲೆಕ್ಸಿಸ್ ಲಾರೆ ಎಂಬಾಕೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿದವಳು. ತನ್ನ ಏಳು ತಿಂಗಳ ಅವಳಿ ಹೆಣ್ಣು ಮಕ್ಕಳು 9.5 ಕಿಲೋಗ್ರಾಂಗಳಷ್ಟು ತೂಕ ಹೊಂದಿರುವುದಾಗಿ ಹೇಳಿದ್ದಾಳೆ.

ಅಮೆರಿಕದ ಮಿನೆಸೋಟದಲ್ಲಿರುವ ಮಿನ್ನಿಯಾಪೋಲಿಸ್-ಸೇಂಟ್ ಪಾಲ್ ನ ಅಲೆಕ್ಸಿಸ್ 49 ಕೆ.ಜಿ. ತೂಕ ಹೊಂದಿದ್ದರು. ಗರ್ಭಾವಸ್ಥೆಯ 38 ವಾರಗಳಲ್ಲಿ, ಅಲೆಕ್ಸಿಸ್ ತೂಕ 82 ಕೆ.ಜಿ.ಗಳಷ್ಟು ಹೆಚ್ಚಾಗಿತ್ತು. ಮಾರ್ಚ್‌ನಲ್ಲಿ ಆಕೆ ತನ್ನ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಇಬ್ಬರೂ ಸುಮಾರು 2.9 ಕಿಲೋಗ್ರಾಂಗಳಷ್ಟು ತೂಕ ಹೊಂದಿದ್ದರು. ಏಳು ತಿಂಗಳಲ್ಲಿ, ಅವಳಿ ಮಕ್ಕಳು ತಮ್ಮ ಜನನದ ತೂಕವನ್ನು ಮೂರು ಪಟ್ಟು ಹೆಚ್ಚಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ. ಮಕ್ಕಳ ಒಟ್ಟು ತೂಕವು ತಾಯಿಗಿಂತ ಹೆಚ್ಚಾಗಿದೆ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...