alex Certify ಆಪ್​ನಲ್ಲಿ ಪರಿಚಯವಾಗಿದ್ದ ಬಾಲಕಿ ಅಪಹರಿಸಿದ್ದ ಐನಾತಿ ಅಂದರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪ್​ನಲ್ಲಿ ಪರಿಚಯವಾಗಿದ್ದ ಬಾಲಕಿ ಅಪಹರಿಸಿದ್ದ ಐನಾತಿ ಅಂದರ್​..!

ವಿಡಿಯೋ ನಿರ್ಮಾಣ ಹಾಗೂ ಶೇರ್​ ಮಾಡುವ ಅಪ್ಲಿಕೇಶನ್​​​ನಲ್ಲಿ ಅಪ್ರಾಪ್ತೆಯನ್ನ ಪರಿಚಯ ಮಾಡಿಕೊಂಡಿದ್ದ 19 ವರ್ಷದ ಯುವಕ ಆಕೆಯನ್ನ ಅಪಹರಣ ಮಾಡಲು ಹೋಗಿ ಜೈಲುಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.

ನೆಬ್​ ಸರಾಯಿ ಎಂಬ ಗ್ರಾಮಕ್ಕೆ ಸೇರಿದ ವ್ಯಕ್ತಿಯೊಬ್ಬ ತನ್ನ ಕುಟುಂಬಸ್ಥರ ಸಮೇತ ಪೊಲೀಸ್​ ಠಾಣೆಗೆ ಆಗಮಿಸಿ ತನ್ನ 15 ವರ್ಷದ ಸಹೋದರಿ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ದೂರನ್ನ ನೀಡಿದ್ದರು.

ವಿಚಾರಣೆಯ ವೇಳೆ ಆಕೆಯ ಹಿರಿಯ ಸಹೋದರಿ, ಅಪಹರಣಕ್ಕೊಳಗಾದ ಬಾಲಕಿ ಆಪ್​ ಒಂದರಲ್ಲಿ ಪರಿಚಿತನಾದ ಯುವಕನೊಂದಿಗೆ ಸಂಪರ್ಕ ಹೊಂದಿದ್ದಳು ಎಂದು ಹೇಳಿದ್ದಾಳೆ. ಅವರಿಬ್ಬರು ಒಬ್ಬರನ್ನೊಬ್ಬರು ಮುಖತಃ ದೆಹಲಿಯಲ್ಲಿ ಭೇಟಿಯಾಗಿರಲಿಲ್ಲ. ಆತನೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಳು. ಇದಾದ ಬಳಿಕ ಬಾಲಕಿ ಕಾಣೆಯಾದ ಬಗ್ಗೆ ನೆಬ್​ ಸರಾಯಿ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 363 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಖ್ಯ ಪೇದೆ ಅಮಿತ್​ ಕುಮಾರ್​ ನೇತೃತ್ವದಲ್ಲಿ ಪೇದೆ ಸಂದೀಪ್​ ಹಾಗೂ ಮನೋಜ್​ರನ್ನ ಉತ್ತರ ಪ್ರದೇಶ ಬಿಜನೂರ್​ಗೆ ಕಳುಹಿಸಿಕೊಟ್ಟಿತ್ತು. ಅನಿಶಾ ನಂಗ್ಲಿ ಗ್ರಾಮಕ್ಕೆ ತೆರಳಿದ ಪೊಲೀಸರು 19 ವರ್ಷದ ತಂಜೀಲ್​ ಅಹಮದ್​ನನ್ನ ಬಂಧಿಸಿದ್ದಾರೆ.

ಅಪಹರಣಕ್ಕೊಳಗಾದ ಬಾಲಕಿ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದರೆ ಬಂಧಿತ ಆರೋಪಿ ಬಡಗಿಯಾಗಿ ಕೆಲಸ ಮಾಡುತ್ತಿದ್ದ. ಬಾಲಕಿಯನ್ನ ರಕ್ಷಿಸಲಾಗಿದ್ದು ದೆಹಲಿಗೆ ಕರೆತರಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...