alex Certify ರಸ್ತೆಯಲ್ಲೇ 12 ಬಾರಿ ಚೂರಿಯಿಂದ ಇರಿದು ಬಾಲಕಿ ಬರ್ಬರವಾಗಿ ಕೊಂದ ಎಸಿ ಮೆಕಾನಿಕ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲೇ 12 ಬಾರಿ ಚೂರಿಯಿಂದ ಇರಿದು ಬಾಲಕಿ ಬರ್ಬರವಾಗಿ ಕೊಂದ ಎಸಿ ಮೆಕಾನಿಕ್ ಅರೆಸ್ಟ್

ನವದೆಹಲಿ: ದೆಹಲಿ ಹೊರ ವಲಯದ ಶಹಬಾದ್ ಡೇರಿಯಲ್ಲಿ 16 ವರ್ಷದ ಬಾಲಕಿಯನ್ನು ಕನಿಷ್ಠ 12 ಬಾರಿ ಇರಿದು ಕೊಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕರ ಎದುರಲ್ಲೇ ಗೆಳೆಯ ಬಾಲಕಿಯನ್ನು ಕೊಂದ ಒಂದು ದಿನದ ನಂತರ ದೆಹಲಿ ಪೊಲೀಸರು 20 ವರ್ಷದ ಎಸಿ ರಿಪೇರಿ ಮೆಕ್ಯಾನಿಕ್ ಸಾಹಿಲ್ ನನ್ನು ಬಂಧಿಸಿದ್ದಾರೆ. .

ಬಾಲಕಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಾಹಿಲ್ ಇದ್ದಕ್ಕಿದ್ದಂತೆ ಅವಳನ್ನು ಅಡ್ಡಗಟ್ಟಿ ಚಾಕುವಿನಿಂದ ಪದೇ ಪದೇ ಇರಿದು ಕಲ್ಲಿನಿಂದ ಆಕೆಯ ತಲೆಗೆ ಹೊಡೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಹಿಲ್ ಮತ್ತು ಮೃತ ಬಾಲಕಿ ಸಂಬಂಧದಲ್ಲಿದ್ದರು. ಆದರೆ, ನಿನ್ನೆ ಅವರು ಜಗಳವಾಡಿದ್ದರು. ಭಾನುವಾರ, ಮೃತ ಬಾಲಕಿ ತನ್ನ ಸ್ನೇಹಿತೆ ನೀತು ಅವರ ಮಗನ ಹುಟ್ಟುಹಬ್ಬಕ್ಕೆ ಹಾಜರಾಗಲು ಹೊರಟಿದ್ದ ವೇಳೆ ಆರೋಪಿ ಸಾಹಿಲ್ ಆಕೆಯನ್ನು ಅಡ್ಡಗಟ್ಟಿ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...