alex Certify ಬರ್ಗರ್​ಗೆ 66 ಸಾವಿರ ರೂ. ತೆತ್ತು ಪರಿತಪಿಸುತ್ತಿದ್ದಾನೆ ಈ ಗ್ರಾಹಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರ್ಗರ್​ಗೆ 66 ಸಾವಿರ ರೂ. ತೆತ್ತು ಪರಿತಪಿಸುತ್ತಿದ್ದಾನೆ ಈ ಗ್ರಾಹಕ…!

35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನ್ಯೂಯಾರ್ಕ್‌ನಲ್ಲಿ ತಮ್ಮ ಸ್ನೇಹಿತರ ಜೊತೆ ರಾತ್ರಿ ಎಫೆಸ್ ಕಬಾಬ್ ಕಿಚನ್ ಫುಡ್ ಸೆಂಟರ್​ಗೆ ಹೋಗಿ ಬರ್ಗರ್​ ಆರ್ಡರ್​ ಮಾಡಿದ್ದು, ಇದೀಗ ಭಾರಿ ವೈರಲ್​ ಆಗಿದೆ. ಏಕೆಂದರೆ ಇದು ಅವರ ಜೀವನದಲ್ಲಿ ಬಹು ದುಬಾರಿ ಬರ್ಗರ್​ ಆಗಿ ಪರಿಣಮಿಸಿದೆ.

ಬರ್ಗರ್​ ತಿಂಗು ಮನೆಗೆ ಬಂದಾಗ ಅವರ ಬ್ಯಾಂಕ್​ನಿಂದ 66 ಸಾವಿರ ರೂಪಾಯಿ ಕಟ್​ ಆಗಿತ್ತು. ಆಮೇಲೆ ತಿಳಿದದ್ದು ದುಡ್ಡು ನೀಡುವಾಗ ತಿಳಿಯದೇ 66 ಸಾವಿರ ರೂಪಾಯಿ ಪೇ ಮಾಡಿರುವುದಾಗಿ. ಮದ್ಯಪಾನ ಮಾಡದಿದ್ದರೂ ತಮಗೆ ಹೀಗೆ ಏಕೆ ಆಯಿತು ಎಂದು ಚಿಂತಿಸಿದ್ದಾರೆ.

ನಂತರ ಸ್ನೇಹಿತನ ಸಲಹೆ ಮೇರೆಗೆ ವಾಪಸ್​ ಮಳಿಗೆಗೆ ಹೋಗಿದ್ದಾರೆ. ಅವರು ತಮ್ಮ ತಪ್ಪು ಇಲ್ಲ. ಬ್ಯಾಂಕ್​ಗೆ ಕೇಳಿ ಎಂದಿದ್ದಾರೆ. ಬ್ಯಾಂಕ್​ನಲ್ಲಿ ವಿಚಾರಿಸಿದರೂ ದೂರು ದಾಖಲು ಮಾಡಿದರೂ ಸದ್ಯ ಹಣ ವಾಪಸ್​ ಬರಲಿಲ್ಲ. ಇದು ನಡೆದು ತಿಂಗಳು ಆದರೂ ಕಟ್​ ಆಗಿರೋ ಹಣ ವಾಪಸ್​ ಬರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ದುಃಖ ತೋಡಿಕೊಂಡಿದ್ದು, ಅದಕ್ಕೆ ಹಲವರು ಹಲವು ರೀತಿಯ ಸಲಹೆ ನೀಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...