
ಇಲ್ಲೊಂದು ಅಪರೂಪದ ಅಮ್ಮ ಮತ್ತು ಮಗು ಕರಡಿಗಳ ಫುಟ್ಬಾಲ್ ಆಟ ಒಡಿಶಾದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕರಡಿಗಳ ಚೆಂಡಾಟ, ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಇದು ಆಗಿದ್ದು ಇಷ್ಟೇ, ಒಡಿಶಾದಲ್ಲಿನ ನಬರಂಗ್ ಜಿಲ್ಲೆಯ ಸುಖಿಗಾಂವ್‌ನಲ್ಲಿ ಕೆಲ ಹುಡುಗರು ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದರು. ಎಲ್ಲಿಂದಲೋ ಎರಡು ಕರಡಿಗಳು ಇವರು ಆಟ ಆಡುತ್ತಿದ್ದ ಜಾಗಕ್ಕೆ ಬಂದವು, ಹುಡುಗರು ಹೆದರಿ ಓಡಿಹೋದರು.
ಸ್ವಲ್ಪ ಸಮಯದ ನಂತರ ಹುಡುಗರಿಗೆ ಅಚ್ಚರಿ ಕಾದಿತ್ತು. ಇವರನ್ನು ಅಟ್ಟಿಸಿಕೊಂಡು ಬರದೇ, ಈ ಕರಡಿಗಳು ಹುಡುಗರು ಅಲ್ಲೇ ಬಿಟ್ಟುಹೋದ ಚೆಂಡಲ್ಲಿ ಆಟವಾಡಲು ಪ್ರಾರಂಭಿಸಿದ್ದವು.
ಒಮ್ಮೊಮ್ಮೆ ಕಾಲಲ್ಲಿ , ಮತ್ತೊಮ್ಮೆ ತನ್ನ ಮೂತಿಯಲ್ಲಿ ಚೆಂಡನ್ನು ಒಗೆಯುತ್ತಿದ್ದ ದೃಶ್ಯ ನೋಡುಗರಿಗೆ ಹಬ್ಬ ಎಂದರೆ ತಪ್ಪಾಗಲಾರದು. ಇಷ್ಟೇ ಅಲ್ಲ, ಅಲ್ಲೇ ಸ್ವಲ್ಪ ಸಮಯದವರೆಗೆ ಆಟವಾಡಿದ ಕರಡಿಗಳು, ಸಮೀಪದಲ್ಲಿರುವ ಕಾಡಿಗೆ, ಈ ಚೆಂಡನ್ನು ತೆಗೆದುಕೊಂಡು ಹೋದವು.
ತುಂಬಾ ಕ್ಯೂಟ್ ಆಗಿದೆ ಬಾಗಿಲಿಗೆ ಅಡ್ಡ ಕುಳಿತಿದ್ದ ಬೆಕ್ಕನ್ನು ಎಳೆದೊಯ್ದು ಮನೆಯೊಳಗೆ ಬಿಟ್ಟ ಶ್ವಾನದ ವಿಡಿಯೋ
ಬೆದರಿ ದೂರದಲ್ಲಿ ನಿಂತ ಹುಡುಗರು ಇವುಗಳ ಆಟವನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಏನೇ ಹೇಳಿ ಅಮ್ಮ ಮತ್ತು ಮಗು ಕರಡಿ ಫುಟ್ಬಾಲ್ ಆಡಿ ಮಜಾ ಮಾಡಿದ್ದೊಂತು ನಿಜ.