![](https://kannadadunia.com/wp-content/uploads/2024/03/e041871f-90c7-483d-97e9-6b4dc680ca1f-1024x773.jpg)
ಸ್ಯಾಂಡಲ್ವುಡ್ ನ ಖ್ಯಾತ ಹಿರಿಯ ನಟಿ ಮಾಲಾಶ್ರೀ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿರುತ್ತಾರೆ. ದಿನಕ್ಕೊಂದು ಫೋಟೋ ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ನಟಿ ಮಾಲಾಶ್ರೀ ಇತ್ತೀಚಿಗಷ್ಟೇ ಮುಂಬೈನಲ್ಲಿರುವ ಸಿದ್ಧಿ ವಿನಾಯಕನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಫೋಟೋವನ್ನು ತಮ್ಮ instagram ಅಪ್ಲೋಡ್ ಮಾಡಿದ್ದು, ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
ಮಾಲಾಶ್ರೀ ಪುತ್ರಿ ಆರಾಧನಾ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ, ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಸಿಕ್ಕಿರುವ ಈ ನಟಿಗೆ ಇದೀಗ ಬೇಡಿಕೆ ಹೆಚ್ಚಾಗಿದೆ. ಇವರ ಮುಂಬರುವ ಚಿತ್ರದ ಕುರಿತು ಇನ್ನೇನು ಶೀಘ್ರದಲ್ಲೇ ನಿರ್ದೇಶಕರು ಬಹಿರಂಗಪಡಿಸಲಿದ್ದಾರೆ.
![](https://kannadadunia.com/wp-content/uploads/2024/03/09304beb-ae8c-49bb-ac52-0f34fddcfa28-400x580.jpg)