alex Certify ಪ್ರತಿ ದಿನ ಒಂದೇ ತಿಂಡಿ ತಿಂದು ಬೇಜಾರಾಗಿದ್ರೆ ಮಾಡಿ ‘ಬ್ರೆಡ್ ದಹಿ ವಡಾ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ಒಂದೇ ತಿಂಡಿ ತಿಂದು ಬೇಜಾರಾಗಿದ್ರೆ ಮಾಡಿ ‘ಬ್ರೆಡ್ ದಹಿ ವಡಾ’

 

ಸಾಮಾನ್ಯವಾಗಿ ಅದೇ ಅದೇ ತಿಂಡಿ ತಿಂದು ಬೇಸರವಾಗಿರುತ್ತೆ. ಹೊಸ ತಿಂಡಿ ಪ್ರಯತ್ನಕ್ಕೆ ಕೈ ಹಾಕುವವರು ಬ್ರೆಡ್ ದಹಿ ವಡಾ ಮಾಡಬಹುದು.

ಬ್ರೆಡ್ ದಹಿ ವಡಾಕ್ಕೆ ಬೇಕಾಗುವ ಪದಾರ್ಥ :

10 ಬ್ರೆಡ್ ತುಂಡುಗಳು

250 ಗ್ರಾಂ ಮೊಸರು

ಸ್ವಲ್ಪ ಪನ್ನೀರ್

ಕರಿಯಲು ಎಣ್ಣೆ

ಪುದೀನ ಸ್ವಲ್ಪ

ಒಂದು ಚಿಟಕಿ ಜೀರಿಗೆ ಪುಡಿ

ರುಚಿಗೆ ತಕ್ಕಂತೆ ಉಪ್ಪು ಮತ್ತು ಮೆಣಸು

1/2 ಚಮಚ ಕೆಂಪು ಮೆಣಸಿನ ಪುಡಿ

1/2 ಚಮಚ ಆಮ್ಚೂರ್ ಪುಡಿ

ಬ್ರೆಡ್ ದಹಿ ವಡಾ ಮಾಡುವ ವಿಧಾನ :

ಬ್ರೆಡ್ನ ಅಂಚುಗಳನ್ನು ಕತ್ತರಿಸಿ ಬೇರ್ಪಡಿಸಿ. ಬ್ರೆಡನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ತಕ್ಷಣ ಹಿಂಡಿರಿ. ಹಿಸುಕಿದ ಪನೀರ್ ಗೆ ಈ ಬ್ರೆಡ್ ತುಂಡುಗಳನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಕೆಂಪು ಮೆಣಸಿನಕಾಯಿ, ಉಪ್ಪು ಮತ್ತು ಆಮ್ಚೂರ್ ಪುಡಿ ಸೇರಿಸಿ ಮಿಕ್ಸ್ ಮಾಡಿ.

ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಕೈಯಲ್ಲಿ ಚಪ್ಪಟೆ ಮಾಡಿ ಬಿಸಿ ಮಾಡಿದ ಎಣ್ಣೆಯಲ್ಲಿ ಕರಿಯಿರಿ. ಇನ್ನೊಂದು ಪಾತ್ರೆಗೆ ಮೊಸರನ್ನು ಹಾಕಿ, ಅದಕ್ಕೆ ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಹುರಿದ ಜೀರಿಗೆ ಪುಡಿ ಸೇರಿಸಿ ಮಿಕ್ಸ್ ಮಾಡಿ. ನಂತ್ರ ತಯಾರಾದ ವಡಾ ಮೇಲೆ ಮೊಸರು ಸುರಿಯಿರಿ. ಜೀರಿಗೆ ಪುಡಿ, ಪುದೀನ ಎಲೆಯಿಂದ ಅಲಂಕರಿಸಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...