alex Certify ಕಾರು ಹೊಂದುವ ಕನಸು ಕಂಡವರಿಗೆ ಭರ್ಜರಿ ಗುಡ್‌ ನ್ಯೂಸ್; ಲೀಸ್‌‌ ಗೆ ಲಭ್ಯವಾಗಲಿದೆ ಮಹೀಂದ್ರಾ ವಾಹನಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಹೊಂದುವ ಕನಸು ಕಂಡವರಿಗೆ ಭರ್ಜರಿ ಗುಡ್‌ ನ್ಯೂಸ್; ಲೀಸ್‌‌ ಗೆ ಲಭ್ಯವಾಗಲಿದೆ ಮಹೀಂದ್ರಾ ವಾಹನಗಳು…!

ಮಹೀಂದ್ರಾ ಕಾರನ್ನು ಓಡಿಸಬೇಕು ಅನ್ನೋ ಕನಸು ಈಗ ನನಸಾಗುತ್ತಿದೆ. ನಮ್ಮ ಕಾರುಗಳನ್ನ ಕೊಳ್ಳುವುದು ಬೇಡ ಇಂತಿಷ್ಟು ದಿನ ಲೀಸ್‌ಗೆ ಪಡೆದು ಡ್ರೈವಿಂಗ್ ಎಂಜಾಯ್ ಮಾಡಿ ಎಂದು ಮಹೀಂದ್ರಾ ಕಂಪನಿ ಹೇಳುತ್ತಿದೆ.

ಹೌದು, ಮಹೀಂದ್ರಾ ಕಂಪನಿಯು ತನ್ನ ಗ್ರಾಹಕರಿಗೆ ವಿಭಿನ್ನ ಅನುಭವವನ್ನು ನೀಡಲು ವಾಹನ ಮತ್ತು ಲೀಸಿಂಗ್ ಚಂದಾದಾರಿಕೆ ಪ್ಲಾಟ್‌ಫಾರ್ಮ್ ಕ್ವಿಕ್‌ಲೀಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಪ್ಲಾಟ್‌ಫಾರ್ಮ್ ಮೂಲಕ, ಗ್ರಾಹಕರು ಯಾವುದೇ ಮಹೀಂದ್ರಾ ವಾಹನವನ್ನು ಸುಲಭವಾಗಿ ಲೀಸ್‌ಗೆ ತೆಗೆದುಕೊಳ್ಳಬಹುದು. ಪ್ಲಾಟ್‌ಫಾರ್ಮ್ ಈಗ ಮಹೀಂದ್ರ ಆಟೋ ಪೋರ್ಟಲ್ ಮತ್ತು ಅದರ ಡೀಲರ್‌ಶಿಪ್ ನೆಟ್‌ವರ್ಕ್‌ನಲ್ಲಿ ಲೈವ್ ಆಗಿ ಲಭ್ಯವಿರುತ್ತದೆ.

ಈ ಸೌಲಭ್ಯವು ಪ್ರಸ್ತುತ ದೇಶದ 8 ನಗರಗಳಲ್ಲಿ ಲಭ್ಯವಾಗಲಿದೆ. ಮುಂಬೈ, ಪುಣೆ, ದೆಹಲಿ, ನೋಯ್ಡಾ, ಗುರುಗ್ರಾಮ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಂತಹ ನಗರಗಳಲ್ಲಿ ಮಹೀದ್ರಾ ವಾಹನಗಳನ್ನ ಲೀಸ್‌ಗೆ ಪಡೆಯಬಹುದು.

ವಾಹನ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: 650 cc ಬೈಕ್‌ ಪರಿಚಯಿಸಲು ರಾಯಲ್ ಎನ್‌ಫೀಲ್ಡ್ ಸಿದ್ಧತೆ..!

‘ಪೇ ಪರ್ ಯೂಸ್’

“ನಮ್ಮ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ‘ಪೇ ಪರ್ ಯೂಸ್’ ಮಾದರಿಯನ್ನು ತಂದಿದ್ದೇವೆ, ಇದು ಗ್ರಾಹಕರಿಗೆ ಅಪಾರ ಪ್ರಯೋಜನಗಳನ್ನು ತರಲಿದೆ. ನಮ್ಮ ಮಾರಾಟದ ಚಾನೆಲ್‌ಗಳ ಮೂಲಕ ಗ್ರಾಹಕರಿಗೆ ಗುತ್ತಿಗೆ ಆಯ್ಕೆಗಳನ್ನು ಒದಗಿಸುವುದು ಗ್ರಾಹಕರಿಗೆ ನಮ್ಯತೆ ಮತ್ತು ಪಾರದರ್ಶಕತೆಯನ್ನು ಒದಗಿಸುತ್ತದೆ ಎಂದು ಮಹೀಂದ್ರಾ ಕಂಪನಿ ಆಟೊಮೋಟಿವ್ ಡಿವಿಷನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ನಕ್ರಾ ತಿಳಿಸಿದ್ದಾರೆ.

ಗ್ರಾಹಕರು ತಮಗೆ ಇಷ್ಟವಾದ ಕಾರುಗಳನ್ನ ಆಯ್ಕೆ ಮಾಡಬಹುದು. ಅಷ್ಟೇ ಅಲ್ಲಾ ಲೀಸ್ ಚಾಲ್ತಿಯ ಮಧ್ಯದಲ್ಲಿ ಅವರಿಗೆ ಕಾರ್ ಬದಲಾಯಿಸುವ ಮನಸ್ಸಾದರೆ ಅದನ್ನು ಮಾಡಬಹುದು. ಸಮಯದ ಮಿತಿಯ ನಡುವೆಯೂ ವಾಹನವನ್ನ ಹಿಂತಿರುಗಿಸುವ ಆಪ್ಷನ್ ಇದೆ ಎಂದು ವಿಜಯ್ ನಕ್ರಾ ತಿಳಿಸಿದ್ದಾರೆ.

ಕ್ವಿಕ್‌ಲೀಸ್ ಪ್ಲಾಟ್‌ಫಾರ್ಮ್ ಮೂಲಕ ಸೇವೆಯನ್ನು ಪಡೆಯುವ ಗ್ರಾಹಕರು 24 ತಿಂಗಳಿಂದ 60 ತಿಂಗಳ ನಡುವಿನ ಅವಧಿಯ ಆಯ್ಕೆಯನ್ನು ಹೊಂದಿರುತ್ತಾರೆ. 10,000 ಕಿಮೀಗಳಿಂದ ಪ್ರಾರಂಭವಾಗುವ ವಾರ್ಷಿಕ‌ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಶುಲ್ಕ ಎಷ್ಟಿರುತ್ತದೆ

ಈ ಸೌಲಭ್ಯವನ್ನು ಬಳಸಲು ಎಷ್ಟು ಹಣವನ್ನು ಖರ್ಚು ಮಾಡಬೇಕು ಅಥವಾ ಎಷ್ಟು ಹಣ ಚಾರ್ಜ್ ಮಾಡುತ್ತಿದ್ದಾರೆ ಎಂಬ ಪ್ರಮುಖ ಪ್ರಶ್ನೆ, ಈಗ ನಿಮ್ಮ ಮನಸ್ಸಿನಲ್ಲಿ ಮೂಡಿರಬೇಕು. ಕಂಪನಿಯ ಹೇಳಿಕೆಯಂತೆ, ವಾಹನಗಳ ಮಾಸಿಕ ಬಾಡಿಗೆಯು ವಿಮೆ, ನಿರ್ವಹಣೆ, ರಸ್ತೆಬದಿಯ ಸಹಾಯ ಸೇರಿದಂತೆ ಯಾವುದೇ ಹೆಚ್ಚುವರಿ ಡೌನ್ ಪೇಮೆಂಟ್ ಇಲ್ಲದೆ‌ 21,000 ರೂ. ಗಳಿಂದ ಪ್ರಾರಂಭವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...