alex Certify ಮಹೇಶ್ ಬಾಬು ನಟನೆಯ ‘ದೂಕುಡು’ ಚಿತ್ರಕ್ಕೆ 12 ವರ್ಷದ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹೇಶ್ ಬಾಬು ನಟನೆಯ ‘ದೂಕುಡು’ ಚಿತ್ರಕ್ಕೆ 12 ವರ್ಷದ ಸಂಭ್ರಮ

Dookudu (2011) - IMDb

2011 ಸೆಪ್ಟೆಂಬರ್ 23 ರಂದು ಬಿಡುಗಡೆಯಾಗಿದ್ದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ದೂಕುಡು’ ಸಿನಿಮಾ ಇಂದಿಗೆ 12 ವರ್ಷ ಪೂರೈಸಿದೆ. ಮಹೇಶ್ ಬಾಬು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಪೋಸ್ಟರ್ ಅಪ್ಲೋಡ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

ಶ್ರೀನು ವೈಟ್ಲ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್ ಬಾಬು ಹಾಗೂ ಸಮಂತಾ ನಾಯಕ – ನಾಯಕಿಯಾಗಿದ್ದು, 14 ರೀಲ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದರು.

ಪ್ರಕಾಶ್ ರಾಜ್, ಬ್ರಹ್ಮಾನಂದಂ, ಎಂಎಸ್ ನಾರಾಯಣ, ಆದಿತ್ಯ ಮೆನನ್, ರಘು ಬಾಬು, ಕೋಟ ಶ್ರೀನಿವಾಸ್ ರಾವ್, ವೆನ್ನೆಲ ಕಿಶೋರ್, ಚಂದ್ರಮೋಹನ್, ವಿನಯ ಪ್ರಸಾದ್, ರವಿಪ್ರಕಾಶ್, ಸುಬ್ಬರಾಜು ಸೇರಿದಂತೆ ಮೊದಲಾದ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...