alex Certify BREAKING: ಮದುವೆ ಸಮಾರಂಭದಿಂದ ವಾಪಾಸ್ ಆಗುತ್ತಿದ್ದಾಗ ಭೀಕರ ಅಪಘಾತ; ಸ್ಥಳದಲ್ಲೇ 6 ಮಂದಿ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮದುವೆ ಸಮಾರಂಭದಿಂದ ವಾಪಾಸ್ ಆಗುತ್ತಿದ್ದಾಗ ಭೀಕರ ಅಪಘಾತ; ಸ್ಥಳದಲ್ಲೇ 6 ಮಂದಿ ದುರ್ಮರಣ

ನಾಗ್ಪುರ: ಟ್ರಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ 6 ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದ ಹೊರವಲಯದಲ್ಲಿ ನಡೆದಿದೆ.

ನಾಗ್ಪುರದ ಸೋನಖಾಂಬ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಟ್ರಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 6 ಜನರು ಸಾವನ್ನಪ್ಪಿದ್ದಾರೆ.

ಅಜಯ್ ದಶರತ್ (45), ವಿಠಲ್ ದಿಂಗಂಬರ್ ತೋಟೆ (45), ಸುಧಾಕರ್ ರಾಮಚಂದ್ರ ಮಾನಕರ್(42), ರಮೇಶ್ ಓಂಕಾರ್(48), ಮಯೂರ್ ಮೂರೇಶ್ವರ್ ಇಂಗ್ಲೆ (26), ವೈಭವ್ (32) ಮೃತರು.

ಮದುವೆ ಸಮಾರಂಭ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ನಾಗ್ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...