alex Certify ಪೋಷಕರು, ಶಿಕ್ಷಕರ ಒತ್ತಡಕ್ಕೆ ಮಣಿದು ಫೆ. 5 ರವರೆಗೆ ರಜೆ ಆದೇಶ ರದ್ದುಪಡಿಸಿ ಶಾಲೆ ಪುನರಾರಂಭಿಸಲು ಗ್ರೀನ್ ಸಿಗ್ನಲ್ ಕೊಟ್ಟ ಮಹಾರಾಷ್ಟ್ರ ಸರ್ಕಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರು, ಶಿಕ್ಷಕರ ಒತ್ತಡಕ್ಕೆ ಮಣಿದು ಫೆ. 5 ರವರೆಗೆ ರಜೆ ಆದೇಶ ರದ್ದುಪಡಿಸಿ ಶಾಲೆ ಪುನರಾರಂಭಿಸಲು ಗ್ರೀನ್ ಸಿಗ್ನಲ್ ಕೊಟ್ಟ ಮಹಾರಾಷ್ಟ್ರ ಸರ್ಕಾರ..!

ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ‌. ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕೊಂಚ ಇಳಿಕೆ ಕಂಡ ನಂತರ, ಶಾಲಾ ಶಿಕ್ಷಣ ಇಲಾಖೆಯ ಸಲ್ಲಿಸಿದ್ದ ಪ್ರಸ್ತಾಪವನ್ನ ಅಂಗೀಕರಿಸಿ ಶಾಲೆ ರೀ ಓಪನ್ ಗೆ ಗ್ರೀನ್ ಸಿಗ್ನಲ್ ನೀಡಿದೆ‌. ಜನವರಿ 24 ರಿಂದ ಮಹಾರಾಷ್ಟ್ರದ ಪ್ರಾಥಮಿಕ ಹಾಗೂ ಪ್ರೌಡಶಾಲೆ ಮಕ್ಕಳಿಗೆ ಭೌತಿಕ ತರಗತಿ ನಡೆಸಲು ಆದೇಶ ಹೊರಡಿಸಿದೆ. ಆದರೆ ರಾಜ್ಯದ ಎಲ್ಲಾ ಭಾಗಗಳಿಗೂ ಈ ಆದೇಶ ಅನ್ವಯಿಸುವುದಿಲ್ಲ‌. ಕೊರೋನಾ ಪಾಸಿಟಿವಿಟಿ ರೇಟ್ ಅಥವಾ ಕಡಿಮೆ ಪ್ರಕರಣಗಳಿರುವ ಜಿಲ್ಲೆಗಳು ಅಥವಾ ಪ್ರದೇಶಗಳಲ್ಲಿ ಮಾತ್ರ ಭೌತಿಕ ಶಾಲೆಗಳನ್ನ ನಡೆಸಲು ಅನುಮತಿ ನೀಡಿದೆ.

ಕೊರೋನಾ ಹೆಚ್ಚಳದ ನಂತರ ಶಾಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಫೆಬ್ರವರಿ 5 ನೇ ತಾರೀಖಿನವರೆಗು ಶಾಲೆಗಳನ್ನ ಮುಚ್ಚುವ ಆದೇಶ ಹೊರಡಿಸಲಾಗಿತ್ತು. ಆದರೆ ಈಗ ಈ ಆದೇಶದಿಂದ ಹಿಂದೆ ಸರಿದಿರುವ ಸರ್ಕಾರ ಪೋಷಕರ ಒತ್ತಾಯಕ್ಕೆ ಮಣೆ ಹಾಕಿದೆ.

BIG NEWS: ಮಕ್ಕಳನ್ನು ಕಾಡುತ್ತಿರುವ ಕೊರೊನಾ 3ನೇ ಅಲೆ; ಒಂದೇ ಜಿಲ್ಲೆಯ 1,639 ಮಕ್ಕಳಿಗೆ ಸೋಂಕು

ಮಹಾರಾಷ್ಟ್ರದ ಕೊರೋನಾ ಪರಿಸ್ಥಿತಿ ಹೇಗಿದೆ ಎಂದರೆ ಕಳೆದ ಮಾರ್ಚ್ ತಿಂಗಳಿನಿಂದ ಶಾಲೆಗಳು ಭಾಗಶಃ ಬಂದ್ ಆಗಿವೆ. ಕೆಲ ತಿಂಗಳ ಹಿಂದೆ ಭೌತಿಕ ತರಗತಿಗಳನ್ನ ಶುರುಮಾಡಿದ್ದ ಸರ್ಕಾರ, ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಮತ್ತೆ ಶಾಲೆಗಳನ್ನ ಬಂದ್ ಮಾಡಿತ್ತು. ಆದರೆ ಪೋಷಕರು ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗ್ತಿದೆ, ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿ ಶಾಲೆಗಳನ್ನ ಪುನರಾರಂಭಿಸುವಂತೆ ಒತ್ತಾಯಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...