alex Certify ಮಹಾರಾಷ್ಟ್ರ ನಾಯಕರ ಗಡಿ ತಗಾದೆ ವಿರುದ್ಧ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಸರ್ವಾನುಮತದ ಅಂಗೀಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರ ನಾಯಕರ ಗಡಿ ತಗಾದೆ ವಿರುದ್ಧ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಸರ್ವಾನುಮತದ ಅಂಗೀಕಾರ

ಬೆಳಗಾವಿ(ಸುವರ್ಣಸೌಧ): ಗಡಿ ವಿಚಾರದಲ್ಲಿ  ಅನಗತ್ಯ ಗೊಂದಲ ಸೃಷ್ಠಿಸುತ್ತಿರುವ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಮಹಾರಾಷ್ಟ್ರ ನಾಯಕರ ವಿರುದ್ಧ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಯಿತು.

ಖಂಡನಾ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈಗಾಗಲೇ ಕರ್ನಾಟಕ ಗಡಿ ಪ್ರದೇಶ ಇತ್ಯರ್ಥವಾಗಿದೆ. ಮಹಾರಾಷ್ಟ್ರ ಸರ್ಕಾರದ ಬೇಡಿಕೆ ಮೇರೆಗೆ ನೇಮಿಸಿದ ಮೆಹರ್‍ಚಂದ್ ಮಹಾಜನ ಆಯೋಗ ನೀಡಿದ ವರದಿಯನ್ನು ಅದೇ ರಾಜ್ಯ ಒಪ್ಪಿಕೊಳ್ಳಲಿಲ್ಲ. ಪದೇ ಪದೇ ಕರ್ನಾಟಕ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ತಕರಾರು ತೆಗೆಯುವುದು ಹಾಗೂ ಮಹಾಮೇಳಾ ಆಯೋಜಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಠಿಸಲು ಯತ್ನಿಸುತ್ತಿದ್ದಾರೆ. ಈ ಬಾರಿ ಸರ್ಕಾರ ಇಂತಹ ಪ್ರಯತ್ನಗಳಿಗೆ ಅವಕಾಶ ನೀಡಲಿಲ್ಲ ಎಂದರು.

ಈಗಾಗಲೇ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮಹಾರಾಷ್ಟ್ರದ ಜನರಿಂದಲೇ ತಿರಸ್ಕೃತವಾಗಿದ್ದು, ತಮ್ಮ ಆಸ್ತಿತ್ವಕ್ಕಾಗಿ ಎಂಇಎಸ್ ಇಂತಹ ತಗಾದೆ ತೆಗೆಯುತ್ತಾ ಗಡಿ ವಿಷಯದಲ್ಲಿ ರಾಜಕೀಯ ಮಾಡುತ್ತಾರೆ. ಯಾವುದೇ ರಾಜ್ಯದ ಗಡಿ ಬದಲಾವಣೆ ಸಂವಿಧಾನದ ಮೂಲಕ ಆಗಬೇಕು. ಸಂವಿಧಾನ ರಚನಾಕಾರರು ಇದನ್ನು ಊಹಿಸಿ ಸಂವಿಧಾನ ಪರಿಚ್ಛೇದ 3ರ ಪ್ರಕಾರ ಮಾತ್ರ ಸಂಸತ್ತಿನಲ್ಲಿ ಈ ಬಗ್ಗೆ ನಿರ್ಣಯಗಳಾಗಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ಎಂ.ಇ.ಎಸ್. ಶಾಸಕ ಜಯಂತ ಪಾಟೀಲ ಅತ್ಯಂತ ಕೀಳು ಭಾಷೆಯಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗೆ ‘ಮಸ್ತಿ’ ಬಂದಿದೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನೀರು ಬಿಡುವುದಿಲ್ಲ ಎಂಬ ದರ್ಪದ ಮಾತುಗಳನ್ನು ಆಡುತ್ತಾರೆ. ಸಂಜಯ ರಾವತ್ ಎಂಬುವವರು ಕರ್ನಾಟಕದ ಮೇಲೆ ಚೀನಾ ದೇಶ ನುಗ್ಗಿ ಬಂದಂತೆ ನುಗ್ಗಿ ಬರುತ್ತೇವೆ ಎಂದಿದ್ದಾರೆ. ನಾವು ಭಾರತೀಯ ಸೈನಿಕರಂತೆ ಅವರನ್ನು ಹಿಮ್ಮೆಟ್ಟಿಸುತ್ತೇವೆ ಹಾಗೂ ನಮ್ಮ ಗಟ್ಟಿತನ ತೋರಿಸುತ್ತೇವೆ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹದÀಗೆಡಲು ಬಿಡುವುದಿಲ್ಲ. ಇಂತಹ ಮಾತುಗಳು ಮುಂದುವರೆದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ರಾಜ್ಯದ್ರೋಹ ಕೆಲಸ ಮಾಡುವವರನ್ನು ಕನ್ನಡ ನಾಡಿನ ಮಕ್ಕಳು ಧೈರ್ಯದಿಂದ ಎದುರಿಸಲು ಸಿದ್ಧರಿದ್ದಾರೆ. ಹಾಗಾಗಿ ನಮ್ಮ ಸದನ ಮಹಾರಾಷ್ಟ್ರದ ಎಲ್ಲಾ ನಾಯಕರ ವರ್ತನೆಯನ್ನು ಒಕ್ಕೊರಲಿನಿಂದ ಖಂಡಿಸುತ್ತದೆ. ರಾಜ್ಯದ ಹಿತಾಸಕ್ತಿ ಮತ್ತು ರಕ್ಷಣೆಗೆ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ.ಮಹಾರಾಷ್ಟ್ರದ ಜನತೆಯು ಅನಾವಶ್ಯಕವಾಗಿ ಸೃಷ್ಠಿಸಿರುವ ಗಡಿ ವಿವಾದವನ್ನು ಖಂಡಿಸಿ ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಿರುವುದಾಗಿ ಈ ಸದನವು ಸರ್ವಾನುಮತದಿಂದ ನೀರ್ಣಯಿಸುತ್ತದೆ ಎಂದರು.

ಸಭೆಯಲ್ಲಿ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆಗೆ ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...