alex Certify ಇದೇ ʼಎಟಿಎಂʼ ನಿಂದ ಹಣ ಪಡೆಯಬೇಕೆಂದು ಮುಗಿಬಿದ್ದ ಜನ…! ಇದರ ಹಿಂದಿತ್ತು ಒಂದು ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ʼಎಟಿಎಂʼ ನಿಂದ ಹಣ ಪಡೆಯಬೇಕೆಂದು ಮುಗಿಬಿದ್ದ ಜನ…! ಇದರ ಹಿಂದಿತ್ತು ಒಂದು ಕಾರಣ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಎಟಿಎಂನಿಂದ 500 ರೂಪಾಯಿ ಡ್ರಾ ಮಾಡಲು ಪ್ರಯತ್ನಿಸಿದಾಗ ಜಾಕ್ ಪಾಟ್ ಹೊಡೆದಿದೆ. ರೂ. 500 ವಿತ್ ಡ್ರಾಗೆ ವಿನಂತಿ ಸಲ್ಲಿಸಿದ, ಆತ ಐದು ರೂ. 500 ನೋಟುಗಳನ್ನು ಪಡೆದಿದ್ದಾನೆ. ಆಶ್ಚರ್ಯದಿಂದ ಮತ್ತೆ ಪ್ರಕ್ರಿಯೆಯನ್ನು ಪುನರಾವರ್ತಿಸಿದ್ದು, ಮತ್ತೆ 500 ರೂಪಾಯಿ ಹಿಂಪಡೆಯಲು ಕೋರಿಕೆ ಇಟ್ಟಾಗ ಆ ವ್ಯಕ್ತಿಗೆ ಪುನಃ ಎಟಿಎಂನಿಂದ 2500 ರೂಪಾಯಿ ಬಂದಿದೆ.

ನಾಗಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಈ ಎಟಿಎಂ ರಹಸ್ಯ ಕಾಳ್ಗಿಚ್ಚಿನಂತೆ ಹರಡಿದೆ. ಎಟಿಎಂ ಕೇಂದ್ರದ ಹೊರಗೆ ನಗದು ಹಿಂಪಡೆಯಲು ಅಪಾರ ಜನಸ್ತೋಮ ನೆರೆದಿತ್ತು.

ಎಟಿಎಂನಲ್ಲಿ ನೂಕು ನುಗ್ಗಲು ಪೊಲೀಸರ ಗಮನ ಸೆಳೆದಿದೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಎಟಿಎಂ ಕೇಂದ್ರವನ್ನು ಮುಚ್ಚಿ ಬ್ಯಾಂಕ್‌ಗೆ ಮಾಹಿತಿ ನೀಡಿದ್ದಾರೆ.

ಅಧಿಕಾರಿಯ ಪ್ರಕಾರ ತಾಂತ್ರಿಕ ದೋಷದಿಂದ ಎಟಿಎಂ ಹೆಚ್ಚುವರಿ ಹಣ ಬಿಡುಗಡೆ ಮಾಡಿದೆ. 100 ಮುಖಬೆಲೆಯ ನೋಟುಗಳನ್ನು ವಿತರಿಸುವ ಉದ್ದೇಶದಿಂದ ಎಟಿಎಂ ಟ್ರೇನಲ್ಲಿ 500 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ತಪ್ಪಾಗಿ ಇರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಘಟನೆಯಲ್ಲಿ ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಎಟಿಎಂಗೆ ಜೂನ್ 12, ಭಾನುವಾರದಂದು ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ್ದು ಎಟಿಎಂನಲ್ಲಿದ್ದ ಲಕ್ಷಾಂತರ ಮೌಲ್ಯದ ನಗದು ಸುಟ್ಟು ಭಸ್ಮವಾಗಿದೆ. ಗ್ಯಾಸ್ ಕಟರ್‌ನಿಂದ ಓಪನ್ ಮಾಡಲು ಯತ್ನಿಸುತ್ತಿದ್ದಾಗ ಅವಘಡ ನಡೆಯಿತು. ಈ ವೇಳೆ 3.98 ಲಕ್ಷ ರೂಪಾಯಿ ಮೌಲ್ಯದ ನಗದು ಬೆಂಕಿಗೆ ಆಹುತಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...