alex Certify ಜಪಾನ್‌ನ ಅಪರೂಪದ ಬೀಚ್​ನ ವಿಹಂಗಮ ನೋಟದ ವಿಡಿಯೋ ವೈರಲ್​: ಮಂತ್ರಮುಗ್ಧರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಪಾನ್‌ನ ಅಪರೂಪದ ಬೀಚ್​ನ ವಿಹಂಗಮ ನೋಟದ ವಿಡಿಯೋ ವೈರಲ್​: ಮಂತ್ರಮುಗ್ಧರಾದ ನೆಟ್ಟಿಗರು

ಸಾಮಾಜಿಕ ಜಾಲತಾಣವು ಬೆರಗುಗೊಳಿಸುವ ಚಿತ್ರಗಳು ಮತ್ತು ವೀಡಿಯೊಗಳ ಕೇಂದ್ರವಾಗಿದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಇದು ಜಪಾನ್‌ನ ಬೀಚ್‌ ವಿಡಿಯೋ. ಈ ಬೀಚ್‌ನ ಒಂದು ವಿಶೇಷವೆಂದರೆ ಹಿಮ, ಮರಳು ಮತ್ತು ಸಮುದ್ರವು ಒಂದೇ ಸ್ಥಳದಲ್ಲಿ ಪರಸ್ಪರ ಭೇಟಿಯಾಗುತ್ತವೆ.

ರೆಡ್ಡಿಟ್ ಬಳಕೆದಾರರು ಈ ವಿಹಂಗಮ ನೋಟವನ್ನು ಶೇರ್​ ಮಾಡಿದ್ದಾರೆ. ಚಿತ್ರವನ್ನು ಛಾಯಾಗ್ರಾಹಕ ಹಿಸಾ ಅವರು ಸ್ಯಾನ್ ಕೈಗನ್ ಜಿಯೋಪಾರ್ಕ್‌ನಲ್ಲಿ ಜಪಾನ್‌ನ ಪಶ್ಚಿಮ ಕರಾವಳಿಯಲ್ಲಿ ತೆಗೆದಿರುವುದಾಗಿ ಹೇಳಲಾಗಿದೆ. “ಸಾಗರದ ತೀರದ ಉದ್ದಕ್ಕೂ ಒಂದು ನಡಿಗೆ,” ಎಂದು ಅವರು ಶೀರ್ಷಿಕೆ ಕೊಟ್ಟಿದ್ದಾರೆ.

ಈ ವಿಡಿಯೋ ನೋಡಿದರೆ ನಿಜವಾಗಿಯೂ ಭೂಮಿಯ ಮೇಲೆ ಇಂಥದ್ದೊಂದು ಚಿತ್ರಣ ಇದೆಯೇ ಎಂದು ಎನಿಸುತ್ತದೆ. ಇದು ಕನಸೋ, ನನಸೋ ಎಂದು ಅಚ್ಚರಿಯಾಗುವುದು ಖಂಡಿತ. ಈ ವಿಡಿಯೋಗೆ ನೆಟ್ಟಿಗರು ಮನಸೋತಿದ್ದಾರೆ. ಜೀವನದಲ್ಲಿ ಒಮ್ಮೆ ಈ ಸ್ಥಳ ನೋಡಬೇಕು ಎಂದು ಹಲವರು ಅನಿಸಿಕೆ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...