alex Certify ಮಾಂತ್ರಿಕ ‘ಮದ್ದು’ ಅಲೊವೆರಾ ಜ್ಯೂಸ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಂತ್ರಿಕ ‘ಮದ್ದು’ ಅಲೊವೆರಾ ಜ್ಯೂಸ್…..!

ಅಲೋವೆರಾ ಜ್ಯೂಸ್‌ ಸರ್ವರೋಗಕ್ಕೂ ಮದ್ದು ಅಂದ್ರೆ ತಪ್ಪೇನಿಲ್ಲ. ಬೇಸಿಗೆಯಲ್ಲಿ ದೇಹದ ಉಷ್ಣತೆ ಕಡಿಮೆ ಮಾಡುವ ಈ ಮಾಂತ್ರಿಕ ರಸ ಹಲವಾರು ರೋಗಗಳಿಗೆ ರಾಮಬಾಣ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್‌ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.

ಋತುವಿನ ಬದಲಾವಣೆಯ ಸಮಯದಲ್ಲಿ ಹಲವು ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ದೈಹಿಕ ಸಮಸ್ಯೆಗಳು ಉಂಟಾಗುತ್ತವೆ. ಡಿಹೈಡ್ರೇಶನ್‌, ಚರ್ಮದಲ್ಲಿ ಬಿರುಕು, ತಲೆನೋವು, ಮಲಬದ್ಧತೆ ಹೀಗೆ ಹತ್ತಾರು ಬಗೆಯ ಸಮಸ್ಯೆಗಳಿಗೆ ಅಲೋವೆರಾ ಪರಿಹಾರ ನೀಡಬಲ್ಲದು.

ಬೇಸಿಗೆಯಲ್ಲಿ ಬರುವ ಒಣಕೆಮ್ಮು ಕೂಡ ಅಲೋವೆರಾ ರಸ ಸೇವನೆಯಂದ ನಿವಾರಣೆಯಾಗುತ್ತದೆ. ವರ್ಷಕ್ಕೊಮ್ಮೆಯಾದರೂ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡುವುದು ಬಹಳ ಮುಖ್ಯ. ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್‌ ಕುಡಿದರೆ ಡಿಟಾಕ್ಸ್‌ ಸುಲಭವಾಗುತ್ತದೆ.

ಆರೋಗ್ಯದ ಜೊತೆಗೆ ಉತ್ತಮ ತ್ವಚೆಗೆ ಕೂಡ ಇದು ಕಾರಣವಾಗುತ್ತದೆ. ಕೆಲವರಿಗೆ ಬಿಸಿಲಿಗೆ ಹೋದ್ರೆ ಸಾಕು ತಲೆನೋವು ಶುರುವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ. ಇದರಿಂದ ತಲೆನೋವು ನಿವಾರಣೆಯಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಅಲೋವೆರಾ ರಸವನ್ನು ಸೇವಿಸುವುದರಿಂದ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚುತ್ತದೆ. ಪರಿಣಾಮ ರಕ್ತಹೀನತೆ ನಿವಾರಣೆಯಾಗಿ, ಆಯಾಸ ಕಡಿಮೆಯಾಗುತ್ತದೆ. ಮಲಬದ್ಧತೆ ಸಮಸ್ಯೆ ಇರುವವರಿಗೆ ಕೂಡ ಅಲೋವೆರಾ ಉತ್ತಮ ಮನೆ ಮದ್ದು. ಬೆಳಗ್ಗೆ ಅಲೋವೆರಾ ಜ್ಯೂಸ್‌ ಸೇವಿಸಿದರೆ ಉದರ ಬಾಧೆ ನಿವಾರಣೆಯಾಗುತ್ತದೆ.

ಅಲೋವೆರಾ ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ವಿಟಮಿನ್ ಸಿ ಕೊರತೆಯಿಂದ ಒಸಡುಗಳಲ್ಲಿ ರಕ್ತಸ್ರಾವ, ದೌರ್ಬಲ್ಯ, ಆಯಾಸ ಮತ್ತು ಇತರ ಕಾಯಿಲೆಗಳಿದ್ದರೆ ಅಲೋವೆರಾ ರಸ ಸೇವಿಸಬಹುದು. ಅಲೋವೆರಾ ಜ್ಯೂಸ್ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಅನೇಕ ಸೌಂದರ್ಯ ತಜ್ಞರು ಅಲೋವೆರಾವನ್ನು ಮುಖ ಮತ್ತು ಕೂದಲಿಗೆ ಹಚ್ಚಲು ಕೂಡ ಸಲಹೆ ನೀಡುತ್ತಾರೆ. ಇದು ಮುಖವನ್ನು ನಿರ್ಮಲಗೊಳಿಸುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ತರುತ್ತದೆ. ನೆತ್ತಿಯಲ್ಲಿ ತುರಿಕೆಯಿದ್ದರೆ ಅದನ್ನು ಕೂಡ ನಿವಾರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...