alex Certify BREAKING NEWS: ಪನ್ನೀರ್ ಸೆಲ್ವಂ ಪುತ್ರನ ಲೋಕಸಭಾ ಚುನಾವಣೆ ಗೆಲುವು ‘ಅಸಿಂಧು’ ಎಂದು ಘೋಷಿಸಿದ ಮದ್ರಾಸ್ ಹೈಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಪನ್ನೀರ್ ಸೆಲ್ವಂ ಪುತ್ರನ ಲೋಕಸಭಾ ಚುನಾವಣೆ ಗೆಲುವು ‘ಅಸಿಂಧು’ ಎಂದು ಘೋಷಿಸಿದ ಮದ್ರಾಸ್ ಹೈಕೋರ್ಟ್

2019ರ ನಡೆದ ಲೋಕಸಭಾ ಚುನಾವಣೆಯಲ್ಲಿ ತೇಣಿ ಕ್ಷೇತ್ರದಿಂದ ಸಂಸದನಾಗಿ ಆಯ್ಕೆಯಾಗಿದ್ದ ಒಪಿ ರವೀಂದ್ರನಾಥ್​​ರ ಗೆಲುವನ್ನು ಅಸಿಂಧು ಎಂದು ಮದ್ರಾಸ್​ ಹೈಕೋರ್ಟ್ ಆದೇಶ ಹೊರಡಿಸಿದೆ.
ರವೀಂದ್ರನಾಥ್​ ಎಐಎಡಿಎಂಕೆ ಉಚ್ಛಾಟಿತ ನಾಯಕನಾಗಿದ್ದು, ತಮಿಳುನಾಡು ಮಾಜಿ ಸಿಎಂ ಓ.ಪನ್ನೀರಸೆಲ್ವಂ ಪುತ್ರರಾಗಿದ್ದಾರೆ. ಗುರುವಾರ ಡಿಎಂಕೆ ನಾಯಕ ಮಿಲಾನಿ ಸಲ್ಲಿಸಿದ್ದ ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯವು ರವೀಂದ್ರನಾಥ್​ ಗೆಲುವನ್ನು ಅನುರ್ಜಿತ ಎಂದು ಘೋಷಿಸಿದೆ.

ಚುನಾವಣೆಯಲ್ಲಿ ಗೆಲುವು ಸಾಧಿಸಲು ರವೀಂದ್ರನಾಥ್ ಮತದಾರರಿಗೆ ಅಕ್ರಮವಾಗಿ ಹಣ ಹಂಚಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ಚುನಾವಣಾ ಅಫಿಡವಿಟ್‌ನಲ್ಲಿ ಆರೋಪಿ ರವೀಂದ್ರನಾಥ್​ ತನ್ನ ಆದಾಯದ ಮೂಲಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಜುಲೈನಲ್ಲಿ ಎಐಎಡಿಎಂಕೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಉಚ್ಚಾಟನೆ ಮಾಡಿದ್ದ ತಂದೆ ಮತ್ತು ಮಗನ ಜೋಡಿಗೆ ಈ ತೀರ್ಪು ಹಿನ್ನಡೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...