alex Certify ಮಹಿಳೆಗೆ ಶ್ರವಣಶಕ್ತಿ ಮರಳಿ ತಂದುಕೊಟ್ಟ ಆಯುಷ್ಮಾನ್‌ ಯೋಜನೆ: ಶಸ್ತ್ರ ಚಿಕಿತ್ಸಾ ವೆಚ್ಚ ಭರಿಸಿದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಗೆ ಶ್ರವಣಶಕ್ತಿ ಮರಳಿ ತಂದುಕೊಟ್ಟ ಆಯುಷ್ಮಾನ್‌ ಯೋಜನೆ: ಶಸ್ತ್ರ ಚಿಕಿತ್ಸಾ ವೆಚ್ಚ ಭರಿಸಿದ ಸರ್ಕಾರ

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆಂದೇ ಹಲವಾರು ಯೋಜನೆಗಳನ್ನ ಜಾರಿ ಮಾಡಿದೆ. ಅದರಲ್ಲಿ ಎಷ್ಟೋ ಯೋಜನೆಗಳು, ಅದರ ಉಪಯೋಗಗಳು ಜನರಿಗೆ ಗೊತ್ತೇ ಇರುವುದಿಲ್ಲ. ಇತ್ತೀಚೆಗೆ ಆಯುಷ್ಮಾನ್‌ ಯೋಜನೆಯ ಲಾಭ ಪಡೆದು ಸುನಿತಾ ಅನ್ನುವವರು, ಕಳೆದುಕೊಂಡಿರುವ ಶ್ರವಣಶಕ್ತಿಯನ್ನ ಮತ್ತೆ ಮರಳಿ ಪಡೆದಿದ್ದಾರೆ.

ಮಧ್ಯಪ್ರದೇಶದ ಖರಗೋನ್‌ ಜಿಲ್ಲೆಯ ಬಳಿ ಇರುವ, ಝಿರನಯಾ ಜನಪದ ಪಂಚಾಯತ್‌ ಅಡಿಯಲ್ಲಿ ಇರುವ ಪುಟ್ಟ ಕ್ಷೇತ್ರ ಟೊಪಲಿ ನಂದಿಯಾ. ಅಲ್ಲಿ ವಾಸಿಸುವ ಸುನೀತಾ ಕಳೆದ ಏಳು ವರ್ಷಗಳ ಹಿಂದೆಯೇ, ಕೇಳುವ ಶಕ್ತಿಯನ್ನ ಕಳೆದುಕೊಂಡಿದ್ದರು. ಆದರೆ ಈಗ ಅವರು 1.5 ಲಕ್ಷ ವೆಚ್ವದ ಕಿವಿಯ ಶಸ್ತ್ರಚಿಕಿತ್ಸೆಯನ್ನ ಉಚಿತವಾಗಿ ಮಾಡಿಸಿಕೊಂಡು, ಸ್ಪಷ್ಟವಾಗಿ ಕಿವಿ ಕೇಳಿಸುವ ಸಾಮರ್ಥ್ಯವನ್ನ ಹೊಂದಿದ್ದಾರೆ.

ಆಶಾ ಕಾರ್ಯಕರ್ತೆ ಪಿಂಕಿ ಮೂರ, ಸುಮಾರು ಎರಡು ವರ್ಷಗಳ ಹಿಂದೆ ಚುಚ್ಚುಮದ್ದಿನ ಅಭಿಯಾನವೊಂದಕ್ಕಾಗಿ ಸುನೀತಾ ಇದ್ದ ಕ್ಷೇತ್ರಕ್ಕೆ ಹೋಗಿದ್ದರು. ಅಲ್ಲಿ ಸುನೀತಾ ಅವರಿಗೆ, ಕಿವುಡುತನದ ಸಮಸ್ಯೆ ಇದೆ ಅಂತ ಗೊತ್ತಾದ ತಕ್ಷಣ ಪಿಂಕಿಯವರು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಸುನೀತಾ ಅವರನ್ನ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದ್ದಾರೆ.

ಸುನೀತಾ ಅವರನ್ನ ಪರೀಕ್ಷೆ ಮಾಡಿದ ವೈದ್ಯರು. ಇದು ಚಿಕಿತ್ಸೆಯಿಂದ ಸರಿ ಹೋಗುವುದಿಲ್ಲ, ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಆದರೆ ಶಸ್ತ್ರ ಚಿಕಿತ್ಸೆಯ ವೆಚ್ಚ 1.5 ಲಕ್ಷ ರೂಪಾಯಿ ಆದ್ದರಿಂದ, ಸುನೀತಾ ಅವರು ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕಿದ್ದರು.

ಆದರೆ ಪಿಂಕಿಯವರು, ಭಾರತ ಸರ್ಕಾರವೇ ಈ ರೀತಿಯ ಶಸ್ತ್ರಚಿಕಿತ್ಸೆಯ ವೆಚ್ಚವನ್ನ ಭರಿಸಲಿದೆ. ಆಯುಷ್ಮಾನ್ ಭಾರತ್‌ ಕಾರ್ಡ್‌ ಇದ್ದರೆ ಅದರ ಉಪಯೋಗ ಪಡೆಯಬಹುದು ಎಂದು ಹೇಳಿದ್ದಾರೆ. ತಕ್ಷಣವೇ ಸುನೀತಾ ಅವರ ಕುಟುಂಬದವರು ಸುನೀತಾ ಅವರನ್ನ ಇಂದೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯಡಿಯಲ್ಲಿ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿಸಿಕೊಂಡಿದ್ದಾರೆ. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಸುನೀತಾ ಅವರು ಮತ್ತೆ ಶ್ರವಣಶಕ್ತಿಯನ್ನ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...