alex Certify ತಾಯಿ ಅಪ್ಲೋಡ್ ಮಾಡಿದ ಫೋಟೋ ಕಾರಣಕ್ಕೆ ಸಿಕ್ಕಿಬಿದ್ದ ಐನಾತಿ ಕಳ್ಳ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಅಪ್ಲೋಡ್ ಮಾಡಿದ ಫೋಟೋ ಕಾರಣಕ್ಕೆ ಸಿಕ್ಕಿಬಿದ್ದ ಐನಾತಿ ಕಳ್ಳ….!

ಅಪರಾಧ ಜಗತ್ತಿನಲ್ಲಿ ಒಂದೇ ಒಂದು ಸುಳಿವು ಸಿಕ್ಕರೂ ಸಾಕು, ಅಪರಾಧಿ ಎಲ್ಲೇ ಇದ್ದರೂ ಹುಡುಕಿ ತೆಗೆಯಬಹುದು ಅನ್ನೊದಕ್ಕೆ ಈ ಘಟನೆ ಬೆಸ್ಟ್ ಎಗ್ಸಾಂಪಲ್.

ಇದು ಮಧ್ಯಪ್ರದೇಶ ಇಂದೋರ್​​​ನ ಬಾಣಗಂಗಾನಲ್ಲಿ ನಡೆದ ಘಟನೆ. ಇಲ್ಲಿ ಮಹಿಳೆಯೊಬ್ಬಳು ಫೇಸ್​ಬುಕ್​ಲ್ಲಿಫೋಟೋ ಒಂದನ್ನ ಅಪ್ಲೋಡ್ ಮಾಡಿದ್ದಾಳೆ. ಆಕೆ ಫೋಟೋ ಅಪ್ಲೋಡ್ ಮಾಡಿದ್ದ ಕೆಲವೇ ಕೆಲವು ನಿಮಿಷಗಳ ನಂತರ ಆಕೆಯ ಮಗನನ್ನ ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.

ಅಸಲಿಗೆ ಆ ಮಹಿಳೆ ಫೋಟೋ ಅಪ್ಲೋಡ್ ಮಾಡಿದ್ದು ಮಗ ಉಡುಗೊರೆಯಾಗಿ ಕೊಟ್ಟಿದ್ದ ಮೊಬೈಲ್​ನಿಂದ. ಅಸಲಿಗೆ ಆತ ಆ ಮೊಬೈಲ್ ಕದ್ದಿದ್ದ. ಅದು ಆಕೆಗೆ ಗೊತ್ತಿರಲಿಲ್ಲ. ಮೊಬೈಲ್ ಕಳೆದುಕೊಂಡಾಕ್ಷಣವೇ ಸಂಜಯ್, ಪೊಲೀಸರಿಗೆ ಮೊಬೈಲ್ ಕಳೆದು ಹೋಗಿರೋದರ ಬಗ್ಗೆ ದೂರು ನೀಡಿದ್ದ.

ಕೆಲವೇ ಕೆಲವು ದಿನಗಳ ಹಿಂದೆ ಸಂಜಯ್ ಹೊಸ ಮೊಬೈಲ್​ನ್ನ ಖರೀದಿ ಮಾಡಿದ್ದರು. ಹೊಸ ಮೊಬೈಲ್ ಕಳೆದುಕೊಂಡ ನಂತರ ಸಂಜಯ್ ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದರು. ಪೊಲೀಸರು ಕಳೆದುಹೋದ ಮೊಬೈಲ್​ನ್ನ ಹುಡುಕುವ ಪ್ರಯತ್ನ ಮಾಡುತ್ತಿದ್ದರು.

ಆಗಲೇ ಆ ಮೊಬೈಲ್​ನಿಂದ ಮಹಿಳೆಯೊಬ್ಬಳು, ಫೇಸ್​ಬುಕ್​ಲ್ಲಿ ಫೋಟೋ ಅಪ್ಲೋಡ್ ಮಾಡಿರೋ ಸುಳಿವು ಪೊಲೀಸರಿಗೆ ಸಿಕ್ಕಿದೆ. ತಕ್ಷಣವೇ ಪೊಲೀಸರು ಕಳ್ಳನ ಜಾಡು ಹಿಡಿದುಕೊಂಡು ಹೋಗಿ ಬಂಧಿಸಿದ್ದಾರೆ.

ಮೊದಲು ಮಹಿಳೆಯನ್ನ ವಿಚಾರಣೆಗೆ ಒಳಪಡಿಸಿದ ಪೊಲೀಸರು, ಕೊನೆಗೆ ಆ ಮಹಿಳೆಯ ಮಗನೇ ಮೊಬೈಲ್ ಕದ್ದಿರೋದು ಗೊತ್ತಾಗಿದೆ. ಅಸಲಿಗೆ ಆ ಮಹಿಳೆಯ ಮಗ ಜಾಫರ್ ಅಲಿಯಾಸ್ ಶಾಬಾದ್ ಆ ಮೊಬೈಲ್​ನ್ನ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟಿದ್ದ.

ಮಗ ಮೊಬೈಲ್ ಗಿಫ್ಟ್ ಕೊಟ್ಟ ಖುಷಿಯಲ್ಲಿ ಹಳೆಯ ಯಾವುದೇ ಐಡಿಗಳನ್ನ ಡಿಲೀಟ್ ಮಾಡದೇ ಆಕೆ ನೇರವಾಗಿ ತನ್ನ ಫೋಟೋ ಫೇಸ್​ಬುಕ್​ಲ್ಲಿಅಪ್ಲೋಡ್ ಮಾಡಿದ್ದಾಳೆ. ಇದೊಂದೇ ಸುಳಿವು ಕಳ್ಳನನ್ನ ಹುಡುಕುವುದಕ್ಕೆ ಸಹಾಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...