alex Certify ಹೆಣ್ಣು ಮಗು ಜನಿಸಿದ್ದಕ್ಕೆ ಉಚಿತ ಪೆಟ್ರೋಲ್ ವಿತರಿಸಿ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣು ಮಗು ಜನಿಸಿದ್ದಕ್ಕೆ ಉಚಿತ ಪೆಟ್ರೋಲ್ ವಿತರಿಸಿ ಸಂಭ್ರಮ

ಬೇತುಲ್: ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿರುವ ಸಂಭ್ರಮಕ್ಕೆ ಉಚಿತ ಪೆಟ್ರೋಲ್ ವಿತರಿಸಿದ್ದಾರೆ.

ಬೆತುಲ್ ಜಿಲ್ಲೆಯಲ್ಲಿ ಪೆಟ್ರೋಲ್ ಪಂಪ್ ಹೊಂದಿರುವ ದೀಪಕ್ ಸೈನಾನಿ ಎಂಬುವವರ ಸಹೋದರಿಯು ಅಕ್ಟೋಬರ್ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಈ ಸಂಭ್ರಮ ಆಚರಿಸಲು ಅವರು ಗ್ರಾಹಕರಿಗೆ ಹೆಚ್ಚುವರಿ ಉಚಿತ ಪೆಟ್ರೋಲ್ ವಿತರಿಸಿದ್ದಾರೆ.

ನವರಾತ್ರಿಯ ಶುಭ ದಿನಗಳಲ್ಲಿ ಸೊಸೆ ಜನಿಸಿದ್ದು ದೀಪಕ್ ಸಂತೋಷ ದುಪ್ಪಟ್ಟಾಗಿದೆ. ಹೀಗಾಗಿ ಅವರು ಉಚಿತ ಪೆಟ್ರೋಲ್ ನೀಡಲು ನಿರ್ಧರಿಸಿ, ಗ್ರಾಹಕರಿಗೆ ವಿತರಿಸಿದ್ದಾರೆ.

ಅಷ್ಟಮಿ, ನವಮಿ, ದಸರಾ, ಅಂದರೆ ಅಕ್ಟೋಬರ್ 13-15ರ ಶುಭ ದಿನಗಳಲ್ಲಿ ಇಂಧನ ಖರೀದಿಸುವ ಗ್ರಾಹಕರಿಗೆ ಸೈನಾನಿ 5 ರಿಂದ 10 ಶೇಕಡಾ ಹೆಚ್ಚುವರಿ ಪೆಟ್ರೋಲ್ ನೀಡಿದ್ದಾರೆ.

“ನಾನು ಬೆಳಿಗ್ಗೆ 9 ರಿಂದ 11 ಮತ್ತು ಸಂಜೆ 5 ರಿಂದ 7ರ ನಡುವೆ ಗರಿಷ್ಠ ಗ್ರಾಹಕರ ಕುಸಿತವನ್ನು ಗಮನಿಸಿದ್ದೇನೆ. ಈ ಸಮಯದಲ್ಲಿ ಹೆಚ್ಚುವರಿ 5-10 ಶೇಕಡಾವನ್ನು ನೀಡಲು ನಿರ್ಧರಿಸಿದೆ” ಎಂದು ದೀಪಕ್ ಹೇಳಿದ್ದಾರೆ.

100 ರೂಪಾಯಿ ಮೌಲ್ಯದ ಪೆಟ್ರೋಲ್ ಖರೀದಿಸುವ ಗ್ರಾಹಕರಿಗೆ ಶೇ. 5 ರಷ್ಟು ಹೆಚ್ಚುವರಿ ಇಂಧನವನ್ನು ನೀಡಲಾಗಿದ್ದು, 200-500 ರೂಪಾಯಿಗಳ ಪೆಟ್ರೋಲ್ ಖರೀದಿಸಿದವರಿಗೆ ಶೇಕಡಾ 10 ರಷ್ಟು ಹೆಚ್ಚುವರಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...