ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಸೊಸೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಭೀಕರ ಘಟನೆಯೊಂದು ಮಧ್ಯ ಪ್ರದೇಶದ ಜಬಲ್ಪುರದದ ಕಂಜೈ ಗ್ರಾಮದಲ್ಲಿ ನಡೆದಿದೆ. ಮೃತದೇಹದ ಜೊತೆಯಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ.
ಮಹೇಂದ್ರ ಪಟೇಲ್ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ ಎಂದು ಸಿಹೋರಾದ ಎಸ್ಡಿಒಪಿ ಶ್ರುತಕೀರ್ತಿ ಸೋಮವಂಶಿ ಮಾಹಿತಿ ನೀಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಫೋನ್ ಪುಡಿ ಮಾಡಿದ ಸೇನಾ ಸಿಬ್ಬಂದಿ: ಆಕ್ರೋಶಗೊಂಡ ನರ್ಸ್ ಮಾಡಿದ್ದೇನು ಗೊತ್ತಾ…?
ಈತ ಆತ್ಮಹತ್ಯೆಗೆ ಶರಣಾದ ಪಕ್ಕದ ಕೋಣೆಯಲ್ಲಿ ಸೊಸೆ ರೋಶಿನಿ ಪಟೇಲ್ ಹಾಗೂ ಪತ್ನಿ ನಂದಿನಿ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದೆ. ರೋಷಿನಿ ಮೃತಪಟ್ಟಿದ್ದು ನಂದಿನಿ ಸ್ಥಿತಿ ಗಂಭೀರವಾಗಿದೆ. ನಂದಿನಿಗೆ ಜಬಲ್ಪುರ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಶಿನಿಯ ಕುತ್ತಿಗೆಯಲ್ಲಿ ಸ್ಕಾರ್ಪ್ನಿಂದ ಬಿಗಿಯಲಾದ ಬಗ್ಗೆ ಕಲೆಗಳು ಕಾಣಿಸಿವೆ. ನಂದಿನಿಯನ್ನು ಕೊಲೆ ಮಾಡಬೇಕೆಂದು ಮಹೇಂದ್ರ 8-10 ಬಾರಿ ಇರಿದಿದ್ದಾನೆ. ಚಾಕು ಹಾಗೂ ಸ್ಕಾರ್ಪ್ ಎಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರೇಯಸಿಯನ್ನ ಭಿಕ್ಷಾಟನೆಗೆ ತಳ್ಳಿ ಬಂದ ಹಣದಲ್ಲಿ ಬಾಯ್ ಫ್ರೆಂಡ್ ಮಾಡ್ತಿದ್ದ ಈ ಕೆಲಸ…!
ಇನ್ನು ಮಹೇಂದ್ರನ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಇದರಲ್ಲಿ ಪತ್ನಿಯ ಜೊತೆ ಪ್ರತಿದಿನ ಜಗಳವಾಗುತ್ತಿತ್ತು ಎಂದು ಬರೆದಿದ್ದಾನೆ. ಅಲ್ಲದೇ ಈ ಸಾವಿಗೆ ತಾನೇ ಕಾರಣ ಎಂದೂ ಬರೆದಿದ್ದಾನೆ.