alex Certify ಪ್ರೇಯಸಿಯನ್ನ ಭಿಕ್ಷಾಟನೆಗೆ ತಳ್ಳಿ ಬಂದ ಹಣದಲ್ಲಿ ಬಾಯ್ ಫ್ರೆಂಡ್ ಮಾಡ್ತಿದ್ದ ಈ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಯಸಿಯನ್ನ ಭಿಕ್ಷಾಟನೆಗೆ ತಳ್ಳಿ ಬಂದ ಹಣದಲ್ಲಿ ಬಾಯ್ ಫ್ರೆಂಡ್ ಮಾಡ್ತಿದ್ದ ಈ ಕೆಲಸ…!

ಹುಡುಗಿಯೊಬ್ಬಳು ತನ್ನ ಕರಾಳ ಕಥೆಯನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾಳೆ. ಬಾಯ್ ಫ್ರೆಂಡ್ ನೀಡ್ತಿದ್ದ ಹಿಂಸೆಯನ್ನು ಹೇಳಿದ್ದಾಳೆ. ಘಟನೆ ಕೆನಡಾದಲ್ಲಿ ನಡೆದಿದೆ.

ಕೆನಡಾದ 22 ವರ್ಷದ ನಿಕೋಲ್, 21 ವರ್ಷದ ಕೈಲ್ ಹೆಲ್ಮ್ ಪ್ರೀತಿಗೆ ಬಿದ್ದಿದ್ದಳು. ಒಂದೇ ಹಾಸ್ಟೆಲ್ ನಲ್ಲಿದ್ದ ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಆರಂಭದಿಂದಲೇ ಕೈಲ್, ನಿಕೋಲ್ ಗೆ ಹಿಂಸೆ ನೀಡ್ತಿದ್ದನಂತೆ. ಯಾರ ಬಳಿಯೂ ಮಾತನಾಡಲು ಅವಕಾಶ ನೀಡಿರಲಿಲ್ಲವಂತೆ. ಒಂದು ದಿನ ಮುಖಕ್ಕೆ ಹೊಡೆದಿದ್ದ ಕೈಲ್, ನಂತ್ರ ಕ್ಷಮೆ ಕೇಳಿದ್ದನಂತೆ.

BREAKING: ಮಾರಿಯಾ ರೆಸ್ಸಾ ಹಾಗೂ ಡಿಮಿಟ್ರಿ ಮುರಾಟೋವ್​​ಗೆ ‘ನೊಬೆಲ್’​ ಶಾಂತಿ ಪ್ರಶಸ್ತಿ

ದಿನ ಕಳೆದಂತೆ ಆತನ ವ್ಯವಹಾರ ಹಿಂಸಾತ್ಮಕವಾಗಿತ್ತಂತೆ. ಅವನಿಂದ ತಪ್ಪಿಸಿಕೊಳ್ಳಲು ನಿಕೋಲ್, ರೂಮ್ ಬದಲಿಸಿದ್ದಳಂತೆ. ಆದ್ರೆ ಅಲ್ಲಿಗೂ ಬಂದ ಕೈಲ್, ಆಕೆಗೆ ಚಿತ್ರ ಹಿಂಸೆ ನೀಡುತ್ತಿದ್ದನಂತೆ. ಒಂದು ದಿನ ಭಿಕ್ಷುಕರ ಜೊತೆ ಭಿಕ್ಷೆ ಬೇಡುವಂತೆ ಬಲವಂತ ಮಾಡಿದ್ದನಂತೆ. ಕುಡಿದು ಹೊಡೆಯುತ್ತಿದ್ದ ಕೈಲ್ ಗೆ ಹೆದರಿ ಅನೇಕ ದಿನ ನಿಕೋಲ್, ಅಪರಿಚಿತರ ಜೊತೆ ಭಿಕ್ಷೆ ಬೇಡಿದ್ದಳಂತೆ.

ಸ್ಮಾರ್ಟ್ ಆಗಿ ಕೆಲಸ ಶುರು ಮಾಡಿ ಕೈ ತುಂಬ ಗಳಿಸಿ

ಭಿಕ್ಷೆ ಬೇಡಿ ತಂದ ಹಣವನ್ನು ಕೈಲ್, ಕುಡಿತಕ್ಕೆ ಬಳಸ್ತಿದ್ದನಂತೆ. ಅಷ್ಟೇ ಅಲ್ಲ ಕಡಿಮೆ ಹಣ ಬಂದ್ರೆ ಹೊಡೆಯುತ್ತಿದ್ದನಂತೆ. ಒಂದು ದಿನ ನಿಕೋಲ್ ಗೆ ಸೂಕ್ಷ್ಮ ಮೊಳೆಯಿಂದ ಚುಚ್ಚಿದ್ದಾನೆ. ದಾರಿ ಮಧ್ಯೆ ನಡೆಯುತ್ತಿದ್ದ ಗಲಾಟೆ ನೋಡಿ ಅಲ್ಲಿಗೆ ಬಂದ ಮಹಿಳೆಯೊಬ್ಬಳು ನಿಕೋಲಳನ್ನು ಮನೆಗೆ ಕರೆದೊಯ್ದಿದ್ದಳಂತೆ. ಅಲ್ಲಿ ಎಲ್ಲ ವಿಷ್ಯ ತಿಳಿದ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದಳಂತೆ. ಪ್ರಕರಣ ದಾಖಲಿಸಿಕೊಂಡು ಕೈಲ್ ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...