alex Certify ಮಗುವಿನ ‘ಆಧಾರ್’‌ ನಲ್ಲಿ‌ ಪ್ರಿಂಟಾಯ್ತು ‘ಮಧು ಕಾ ಪಂಚವಾ ಬಚ್ಚಾ’; ಶಾಲಾ ಪ್ರವೇಶಕ್ಕೆ ತೊಡಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ‘ಆಧಾರ್’‌ ನಲ್ಲಿ‌ ಪ್ರಿಂಟಾಯ್ತು ‘ಮಧು ಕಾ ಪಂಚವಾ ಬಚ್ಚಾ’; ಶಾಲಾ ಪ್ರವೇಶಕ್ಕೆ ತೊಡಕು

ಆಧಾರ್ ಕಾರ್ಡ್ ವಿಚಾರದಲ್ಲಿ ಅನೇಕ ತಮಾಷೆಯ ಜೋಕ್‌ಗಳು ಬರುತ್ತಿರುತ್ತವೆ. ಇದೀಗ ಕಚಗುಳಿ ಇಡುವಂತಹ ಸುದ್ದಿಯೊಂದು ಗಮನ ಸೆಳೆಯುತ್ತಿದೆ.

ಮಹಿಳೆಯೊಬ್ಬರು ತಮ್ಮ ಮಗುವಿನ ಆಧಾರ್ ಕಾರ್ಡ್‌ನಲ್ಲಿ ‘ಮಧು ಕಾ ಪಂಚವಾ ಬಚ್ಚಾ’ ಮತ್ತು ‘ಬೇಬಿ ಫೈವ್ ಆಫ್ ಮಧು’ ಎಂದು ಸೇರಿಸಿರುವುದು ಹಾಸ್ಯಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಬುಡೌನ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಹಿಳೆ ತನ್ನ ಮಗುವಿಗೆ ಪ್ರವೇಶ ಕೋರಿದ ನಂತರ ಆಧಾರ್ ಕಾರ್ಡ್‌ನ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪಠ್ಯ ಪುಸ್ತಕದಲ್ಲಿ ವರದಕ್ಷಿಣೆ ಪ್ರಯೋಜನಗಳ ಪಟ್ಟಿ ; ರೊಚ್ಚಿಗೆದ್ದ ಟ್ವೀಟಿಗರು

ಆಕೆಯ ನಿಜವಾದ ಗುರುತಿನ ಬದಲಿಗೆ ಆಕೆಯ ಹೆಸರು ಆಧಾರ್ ಕಾರ್ಡ್‌ನಲ್ಲಿ “ಮಧು ಕಾ ಪಂಚವಾ ಬಚ್ಚಾ” ಎಂದು ನಮೂದಾಗಿದೆ.

ರಾಯ್‌ಪುರ ಗ್ರಾಮದ ನಿವಾಸಿ ದಿನೇಶ್ ಎಂಬುವರು ತಮ್ಮ ಮಗಳು ಆರತಿಗೆ ಪ್ರವೇಶ ಪಡೆಯಲು ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟಾಗ ಆಕೆಯ ಆಧಾರ್ ಕಾರ್ಡ್ ಪರಿಶೀಲಿಸಿದ ನಂತರ, ಶಿಕ್ಷಕಿ ಪ್ರವೇಶ ನಿರಾಕರಿಸಿದರು. ಆಧಾರ್ ಕಾರ್ಡ್ ಸರಿಪಡಿಸಿಕೊಡುವಂತೆ ಶಿಕ್ಷಕರು ದಿನೇಶ್‌ಗೆ ಸೂಚಿಸಿದರು.

ಈ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿ ದೀಪಾ ರಂಜನ್ ಮಾತನಾಡಿ, ‘ಅಂಚೆ ಕಚೇರಿ ಹಾಗೂ ಬ್ಯಾಂಕ್ ಗಳಲ್ಲಿ ಆಧಾರ್ ಕಾರ್ಡ್ ಸಿದ್ಧಪಡಿಸಲಾಗುತ್ತಿದೆ. ಕೆಲವರ ನಿರ್ಲಕ್ಷದಿಂದ ಈ ತಪ್ಪು ನಡೆದಿದೆ. ನಾವು ಬ್ಯಾಂಕ್ ಮತ್ತು ಅಂಚೆ ಕಚೇರಿ ಅಧಿಕಾರಿಗಳನ್ನು ಈ ಬಗ್ಗೆ ಎಚ್ಚರಿಸುತ್ತೇವೆ ಮತ್ತು ಅಂತಹ ನಿರ್ಲಕ್ಷ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...