alex Certify ಬಿಜೆಪಿ ಶಾಸಕ ಯತ್ನಾಳ್ ಬಸ್ ನಿಲ್ದಾಣದಲ್ಲಿ ಕುಳಿತು ಭವಿಷ್ಯ ಹೇಳಲಿ; ಸಚಿವ ಮಧು ಬಂಗಾರಪ್ಪ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಶಾಸಕ ಯತ್ನಾಳ್ ಬಸ್ ನಿಲ್ದಾಣದಲ್ಲಿ ಕುಳಿತು ಭವಿಷ್ಯ ಹೇಳಲಿ; ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಕಲಬುರ್ಗಿ: ಲೋಕಸಭಾ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿರುವ ಬಿಜೆಪಿ ಶಾಸಕ ಬಸನಗೌದ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.

ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಯತ್ನಾಳ್ ಗೆ ಮಾಡಲು ಕೆಲಸವಿಲ್ಲ, ಬಸ್ ನಿಲ್ದಾಣದಲ್ಲಿ ಕುಳಿತು ಭವಿಷ್ಯ ಹೇಳಲಿ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಜನರನ್ನು ಹುಚ್ಚರನ್ನಾಗಿಸುತ್ತಿದೆ ಎಂಬ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ತಿರುಗೇಟು ನೀಡಿರುವ ಸಚಿವರು, ಅನಂತ ಕುಮಾರ್ ಹೆಗಡೆಯೇ ದೊಡ್ಡ ಹುಚ್ಚ. ಆತ ಎಲೆಕ್ಷನ್ ಬರುವವರೆಗೂ ಮಲ್ಕೊಂಡಿರ್ತಾನೆ. ಎಲೆಕ್ಷನ್ ಬಂದ ಬಳಿಕ ಎದ್ದು ಬರ್ತಾನೆ. ಈ ಬಾರಿ ಆತನನ್ನು ರಾಜಕೀಯವಾಗಿ ಪರ್ಮನೆಂಟ್ ಆಗಿ ಮಲಗಿಸುತ್ತೇವೆ ಎಂದು ಕಿಡಿಕಾರಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...