alex Certify BIG NEWS: ಶುಗರ್​, ಸ್ಟಾರ್ಚ್​ ಬಳಸಿ ಬಯೋ ಪ್ಲಾಸ್ಟಿಕ್​ ಉತ್ಪಾದನೆ; ಪ್ಲಾಸ್ಟಿಕ್​ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶುಗರ್​, ಸ್ಟಾರ್ಚ್​ ಬಳಸಿ ಬಯೋ ಪ್ಲಾಸ್ಟಿಕ್​ ಉತ್ಪಾದನೆ; ಪ್ಲಾಸ್ಟಿಕ್​ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ

ಬ್ರಿಟಿಷ್​ ಸಂಸ್ಥೆಯಿಂದ ವಿಶ್ವದ ಮೊದಲ ಜೈವಿಕ ಪ್ಲಾಸ್ಟಿಕ್​ ವಿನೈಲ್ ತಯಾರಿಸಿದ್ದೇವೆ ಎಂದು ಹೇಳಿಕೊಂಡಿದೆ. ಇದು ಹೆಚ್ಚು ವಿಷಕಾರಿಯಾದ ಪಿವಿಸಿಯ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂದು ಸಂಸ್ಥೆ ಆಶಿಸಿದೆ.

ಬಯೋಪ್ಲಾಸ್ಟಿಕ್​ಗಳನ್ನು ಸಕ್ಕರೆ ಮತ್ತು ಪಿಷ್ಟಗಳಂತಹ ಮೂಲಗಳಿಂದ ಪಡೆಯಲಾಗಿದೆ. ತೈಲ ಅಥವಾ ಅನಿಲಕ್ಕಿಂತ ಹೆಚ್ಚಾಗಿ ಅವುಗಳ ಉತ್ಪಾದನೆಯಲ್ಲಿ ಯಾವುದೇ ವಿಷಕಾರಿ ತ್ಯಾಜ್ಯವನ್ನು ಸೃಷ್ಟಿಯಾಗುವುದಿಲ್ಲ ಎಂದು ಹೇಳಲಾಗಿದೆ.

ಯುಕೆ ಸಂಸ್ಥೆ ಎವಲ್ಯೂಷನ್​ನ ಹೊಸ ಬಯೋಪ್ಲಾಸ್ಟಿಕ್​ ವಿನೈಲ್​ ಅನ್ನು ಎನ್​ಜಿಒ ಮ್ಯೂಸಿಕ್​ ಡಿಕ್ಲೇರ್ಸ್​ ತುರ್ತು ಅನುಮೋದನೆ ನೀಡಿದೆ. ಇದು ಕಲಾವಿದರು ಮತ್ತು ಸಂಗೀತ ಉದ್ಯಮದ ವೃತ್ತಿಪರರು 2019ರಲ್ಲಿ ಸ್ಥಾಪಿಸಲಾದ ಹವಾಮಾನ ಬದಲಾವಣೆ ಅಭಿಯಾನದ ಗುಂಪು.

“ಈ ಬೆಳವಣಿಗೆ ಪ್ಲಾಸ್ಟಿಕ್​ಗೆ ಪರ್ಯಾಯವಾಗಿ ವಿನೈಲ್​ ಅನ್ನು ನೀಡಲು ಸಾಧ್ಯವಾದರೆ, ಅದು ಉದ್ಯಮದ ಪ್ರಮುಖ ಮಾಲಿನ್ಯಕಾರಕ ಅಂಶಗಳಲ್ಲಿ ಒಂದನ್ನು ಸಂರ್ಪೂಣವಾಗಿ ತೊಡೆದುಹಾಕಬಹುದು’ ಎಂದು ಎನ್​ಜಿಒದ ಸಹ- ಸಂಸ್ಥಾಪಕ ಲೆವಿಸ್​ ಜೇಮಿಸನ್​ ತಿಳಿಸಿದ್ದಾರೆ.

ಎಲ್ಲಾ ವಿನೈಲ್​ ರೆಕಾರ್ಡ್​ಗಳನ್ನು ಪಾಲಿವಿನೈಲ್​ ಕ್ಲೋರೈಡ್ನಿಂದ ತಯಾರಿಸಲಾಗುತ್ತದೆ ಇದು ಪರಿಸರಕ್ಕೆ ಅತ್ಯಂತ ಹಾನಿಕಾರಕ. ಇದರ ಉತ್ಪಾದನೆಯು ಸಹ ವಿಷಕಾರಿ ಕ್ಲೋರಿನ್​-ಆಧಾರಿತ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...