ಬ್ರಿಟಿಷ್ ಸಂಸ್ಥೆಯಿಂದ ವಿಶ್ವದ ಮೊದಲ ಜೈವಿಕ ಪ್ಲಾಸ್ಟಿಕ್ ವಿನೈಲ್ ತಯಾರಿಸಿದ್ದೇವೆ ಎಂದು ಹೇಳಿಕೊಂಡಿದೆ. ಇದು ಹೆಚ್ಚು ವಿಷಕಾರಿಯಾದ ಪಿವಿಸಿಯ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂದು ಸಂಸ್ಥೆ ಆಶಿಸಿದೆ.
ಬಯೋಪ್ಲಾಸ್ಟಿಕ್ಗಳನ್ನು ಸಕ್ಕರೆ ಮತ್ತು ಪಿಷ್ಟಗಳಂತಹ ಮೂಲಗಳಿಂದ ಪಡೆಯಲಾಗಿದೆ. ತೈಲ ಅಥವಾ ಅನಿಲಕ್ಕಿಂತ ಹೆಚ್ಚಾಗಿ ಅವುಗಳ ಉತ್ಪಾದನೆಯಲ್ಲಿ ಯಾವುದೇ ವಿಷಕಾರಿ ತ್ಯಾಜ್ಯವನ್ನು ಸೃಷ್ಟಿಯಾಗುವುದಿಲ್ಲ ಎಂದು ಹೇಳಲಾಗಿದೆ.
ಯುಕೆ ಸಂಸ್ಥೆ ಎವಲ್ಯೂಷನ್ನ ಹೊಸ ಬಯೋಪ್ಲಾಸ್ಟಿಕ್ ವಿನೈಲ್ ಅನ್ನು ಎನ್ಜಿಒ ಮ್ಯೂಸಿಕ್ ಡಿಕ್ಲೇರ್ಸ್ ತುರ್ತು ಅನುಮೋದನೆ ನೀಡಿದೆ. ಇದು ಕಲಾವಿದರು ಮತ್ತು ಸಂಗೀತ ಉದ್ಯಮದ ವೃತ್ತಿಪರರು 2019ರಲ್ಲಿ ಸ್ಥಾಪಿಸಲಾದ ಹವಾಮಾನ ಬದಲಾವಣೆ ಅಭಿಯಾನದ ಗುಂಪು.
“ಈ ಬೆಳವಣಿಗೆ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ವಿನೈಲ್ ಅನ್ನು ನೀಡಲು ಸಾಧ್ಯವಾದರೆ, ಅದು ಉದ್ಯಮದ ಪ್ರಮುಖ ಮಾಲಿನ್ಯಕಾರಕ ಅಂಶಗಳಲ್ಲಿ ಒಂದನ್ನು ಸಂರ್ಪೂಣವಾಗಿ ತೊಡೆದುಹಾಕಬಹುದು’ ಎಂದು ಎನ್ಜಿಒದ ಸಹ- ಸಂಸ್ಥಾಪಕ ಲೆವಿಸ್ ಜೇಮಿಸನ್ ತಿಳಿಸಿದ್ದಾರೆ.
ಎಲ್ಲಾ ವಿನೈಲ್ ರೆಕಾರ್ಡ್ಗಳನ್ನು ಪಾಲಿವಿನೈಲ್ ಕ್ಲೋರೈಡ್ನಿಂದ ತಯಾರಿಸಲಾಗುತ್ತದೆ ಇದು ಪರಿಸರಕ್ಕೆ ಅತ್ಯಂತ ಹಾನಿಕಾರಕ. ಇದರ ಉತ್ಪಾದನೆಯು ಸಹ ವಿಷಕಾರಿ ಕ್ಲೋರಿನ್-ಆಧಾರಿತ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ.