alex Certify ಲಂಡನ್ ನಲ್ಲಿ ಕದ್ದ ಐಷಾರಾಮಿ ಕಾರು ಪಾಕಿಸ್ತಾನದ ಕರಾಚಿಯಲ್ಲಿ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಡನ್ ನಲ್ಲಿ ಕದ್ದ ಐಷಾರಾಮಿ ಕಾರು ಪಾಕಿಸ್ತಾನದ ಕರಾಚಿಯಲ್ಲಿ ಪತ್ತೆ….!

ವಾಹನಗಳನ್ನು ಕಳವು ಮಾಡಿದ ವೇಳೆ ಕಳ್ಳರು ನಂಬರ್ ಬದಲಿಸಿ ಮತ್ತೊಂದು ಊರಿನಲ್ಲಿ ಮಾರಾಟ ಮಾಡುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಲಂಡನ್ ನಲ್ಲಿ ಕಳುವಾಗಿದ್ದ ಐಷಾರಾಮಿ ಕಾರು ಪಾಕಿಸ್ತಾನದ ಕರಾಚಿಯಲ್ಲಿ ಪತ್ತೆಯಾಗಿದೆ.

ಹೌದು, ಕೆಲವು ದಿನಗಳ ಹಿಂದೆ ಸಿಮೆಂಟ್ ಬಣ್ಣದ ಐಷಾರಾಮಿ ಬೆಂಟ್ಲಿ ಮುಲ್ಸಾನೆ ಕಾರು ಯುನೈಟೆಡ್ ಕಿಂಗ್ಡಮ್ ನ ಲಂಡನ್ ನಲ್ಲಿ ಕಳುವಾಗಿದ್ದು ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದೀಗ ಈ ಕಾರು ಕರಾಚಿಯ ವ್ಯಕ್ತಿಯೊಬ್ಬರ ಮನೆಯಲ್ಲಿ ಪತ್ತೆಯಾಗಿದೆ.

ಯುಕೆ ಬೇಹುಗಾರಿಕೆ ಸಂಸ್ಥೆಯು ಪಾಕಿಸ್ತಾನದ ಕಸ್ಟಮ್ಸ್ ಅಧಿಕಾರಿಗಳಿಗೆ ಈ ಕಾರಿನ ಕುರಿತಂತೆ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ದಾಳಿ ವೇಳೆ ಕಾರು ಪತ್ತೆಯಾಗಿದೆ. ಇದನ್ನು ತರಿಸಿಕೊಂಡಿದ್ದ ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತ ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಅಗತ್ಯ ದಾಖಲೆ ಪತ್ರಗಳನ್ನು ನೀಡುವುದಾಗಿ ಮಾರಾಟಗಾರ ಹೇಳಿದ್ದ ಎಂದು ತಿಳಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...