alex Certify ಈ ರಾಶಿಯವರಿಗೆ ಶುಭ ಫಲ ನೀಡಲಿದೆ ಚಂದ್ರಹ್ರಗಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಶುಭ ಫಲ ನೀಡಲಿದೆ ಚಂದ್ರಹ್ರಗಣ

ವರ್ಷದ ಕೊನೆಯ ಚಂದ್ರಗ್ರಹಣ ಕಾರ್ತಿಕ ಪೂರ್ಣಿಮೆ ದಿನ ಸಂಭವಿಸಲಿದೆ. ಚಂದ್ರ ಗ್ರಹಣ ಮೇಷ ರಾಶಿ ಮತ್ತು ಭರಣಿ ನಕ್ಷತ್ರದಲ್ಲಿ ಸಂಭವಿಸಲಿದೆ. ಹಾಗಾಗಿ ಮೇಷ ರಾಶಿ ಹಾಗೂ ಭರಣಿ ನಕ್ಷತ್ರದ ಮೇಲೆ ಇದ್ರ ಪ್ರಭಾವ ಹೆಚ್ಚಿರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣ ಕೆಲ ರಾಶಿಯವರಿಗೆ ಶುಭ ಫಲ ನೀಡಿದ್ರೆ ಮತ್ತೆ ಕೆಲವರಿಗೆ ಅಶುಭ ಫಲ ನೀಡಲಿದೆ

ಮೇಷ ರಾಶಿ :  ಚಂದ್ರ ಗ್ರಹಣ ಮೇಷ ರಾಶಿಯ ಮೇಲೆ ಸಂಭವಿಸುತ್ತಿರುವ ಕಾರಣ ಅವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಮೇಷ ರಾಶಿಯವರು ಹಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡದಿರುವುದು ಒಳ್ಳೆಯದು. ಈ ರಾಶಿಯವರು ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು.

ವೃಷಭ ರಾಶಿ : ಚಂದ್ರಗ್ರಹಣ ವೃಷಭ ರಾಶಿಯವರಿಗೆ ಮಂಗಳಕರವಾಗಿರಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಗ್ರಹಣ ಮಿಶ್ರ ಫಲ ನೀಡಲಿದೆ. ಆರೋಗ್ಯದ ಬಗ್ಗೆ ಈ ರಾಶಿಯವರು ಹೆಚ್ಚು ಕಾಳಜಿ ವಹಿಸಬೇಕು. ಆದ್ರೆ ಹೊಸದಾಗಿ ವ್ಯಾಪಾರ ಶುರು ಮಾಡುವವರಿಗೆ ಇದು ಒಳ್ಳೆಯ ಸಮಯ.

ಕರ್ಕ ರಾಶಿ : ಕರ್ಕ ರಾಶಿಯವರು ಅನವಶ್ಯಕ ಚರ್ಚೆಯಲ್ಲಿ ಸಿಕ್ಕಿ ಬೀಳಬೇಡಿ. ವಿವಾದದಿಂದ ದೂರವಿದ್ರೆ ಲಾಭ ನಿಶ್ಚಿತ.

ಸಿಂಹ ರಾಶಿ : ಚಂದ್ರಗ್ರಹಣದಿಂದ ಈ ರಾಶಿಯವರಿಗೆ ಲಾಭವಾಗಲಿದೆ. ಹಣಕಾಸಿನ ಸ್ಥಿತಿಯಲ್ಲಿ ಚೇತರಿಕೆ ಕಾಣಲಿದೆ. ಸಿಕ್ಕಿಬಿದ್ದಿದ್ದ ಹಣ ನಿಮಗೆ ಸಿಗಲಿದೆ.

ಕನ್ಯಾ ರಾಶಿ : ಚಂದ್ರಗ್ರಹಣ ನಷ್ಟ ತರುವ ಸಾಧ್ಯತೆಯಿದೆ. ಹಾಗಾಗಿ ಕನ್ಯಾ ರಾಶಿಯವರು ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ಹಣ ಹೂಡಿಕೆ ಮಾಡಲು ಹೋಗ್ಬೇಡಿ. ಆದ್ರೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ನಿಮಗಿರುತ್ತದೆ.

ತುಲಾ ರಾಶಿ :  ತುಲಾ ರಾಶಿಯವರು ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಇದ್ರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಮನಸ್ಸನ್ನು ಶಾಂತವಾಗಿಟ್ಟುಕೊಂಡು ಆಲೋಚನೆ ಮಾಡಿದ್ರೆ ಒಳ್ಳೆಯದು.

ವೃಶ್ಚಿಕ ರಾಶಿ : ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದದಲ್ಲಿ ಸಿಕ್ಕಿಕೊಳ್ಳದೆ ಹೋದ್ರೆ ಒಳ್ಳೆಯದು.

ಧನು ರಾಶಿ : ಚಂದ್ರಗ್ರಹಣ ಶುಭಕರವಾಗಿರಲಿದೆ. ಆಕಸ್ಮಿಕವಾಗಿ ಹಣ ಬರುವ ಸಾಧ್ಯತೆಯಿದೆ.

ಮಕರ ರಾಶಿ : ಈ ರಾಶಿಯವರಿಗೆ ಯಶಸ್ಸು ಲಭಿಸಲಿದೆ. ಪ್ರತಿಷ್ಠೆ ಹೆಚ್ಚಾಗಲಿದೆ. ಹೊಸ ವಾಹನ ಖರೀದಿ ಭಾಗ್ಯ ಒದಗಿ ಬರಲಿದೆ.

ಕುಂಭ ರಾಶಿ : ಚಂದ್ರಗ್ರಹಣ ಉತ್ತಮ ಫಲ ನೀಡಲಿದೆ. ಈ ರಾಶಿಯವರಿಗೆ ಆಸ್ತಿ ಸಿಗುವ ಸಾಧ್ಯತೆಯಿದೆ.

ಮೀನ ರಾಶಿ : ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಚಂದ್ರಗ್ರಹಣ ಮಂಗಳಕರವಾಗಿರಲಿದ್ದು, ಹೊಸ ಉದ್ಯೋಗ ಶುರು ಮಾಡುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...