alex Certify ಕೋವಿಡ್ ಲಸಿಕಾ ಕೇಂದ್ರದತ್ತ ಜನರನ್ನು ಸೆಳೆಯಲು ಸರ್ಕಾರದ ಹೊಸ ಪ್ಲಾನ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕಾ ಕೇಂದ್ರದತ್ತ ಜನರನ್ನು ಸೆಳೆಯಲು ಸರ್ಕಾರದ ಹೊಸ ಪ್ಲಾನ್‌

ಕೋವಿಡ್ ಲಸಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡವರಿಗೆ ವಾರ ಹಾಗೂ ತಿಂಗಳಿಗೊಂದರಂತೆ ಲಕ್ಕಿ ಡ್ರಾ ಮೂಲಕ ಬಹುಮಾನ ನೀಡುವ ಐಡಿಯಾ ಮೂಲಕ ಇನ್ನೂ ಮೊದಲನೇ ಚುಚ್ಚುಮದ್ದನ್ನೇ ಪಡೆಯದ ಹಾಗೂ ಅವಧಿ ಮುಗಿದರೂ ಎರಡನೇ ಚುಚ್ಚುಮದ್ದಿಗೆ ಬಾರದ ಮಂದಿಯನ್ನು ಲಸಿಕಾ ಕೇಂದ್ರದತ್ತ ಸೆಳೆಯಲು ಸರ್ಕಾರ ಚಿಂತಿಸುತ್ತಿದೆ.

ಕೆಲಸದ ಜಾಗಗಳಲ್ಲೇ ಲಸಿಕೆ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಪೂರ್ಣ ಲಸಿಕೆ ಪಡೆದ ಮಂದಿಗೆ ಬ್ಯಾಡ್ಜ್‌ಗಳನ್ನು ವಿತರಿಸುವಂಥ ಕ್ರಮಗಳಿಗೂ ಕೇಂದ್ರ ಸರ್ಕಾರ ಪ್ಲಾನ್ ಮಾಡುತ್ತಿದೆ. ಈ ಅಭಿಯಾನಗಳಿಗೆ ಮುಂದಾಗಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶೀಘ್ರವೇ ನಿರ್ದೇಶನ ಹೊರಡುವ ಸಾಧ್ಯತೆ ಇದೆ.

ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತೆ ಈ ಅಂಶ

ಸ್ವತಃ ಲಸಿಕೆಗಳನ್ನು ಪಡೆದಿರುವ ಪ್ರಭಾವಿ ವ್ಯಕ್ತಿಗಳನ್ನು ತಂತಮ್ಮ ಪ್ರದೇಶಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಕುರಿತು ಅರಿವು ಮೂಡಿಸುವಂಥ ಯೋಜನೆಗಳನ್ನೂ ರೂಪಿಸಲಾಗಿದೆ. ಇಂಥ ವ್ಯಕ್ತಿಗಳನ್ನು ’ಲಸಿಕಾ ರಾಯಭಾರಿ’ಗಳನ್ನಾಗಿ ನೇಮಕ ಮಾಡಿ, ತಮ್ಮ ಊರುಗಳು ಹಾಗೂ ಜಿಲ್ಲೆಗಳ ಮಂದಿಗೆ ಲಸಿಕೆ ಪಡೆಯಲು ಉತ್ತೇಜನ ನೀಡುವಂತೆ ಕೋರಲಾಗುವುದು.

’ಹರ್‌ ಘರ್‌ ದಸ್ತಕ್’ ಹೆಸರಿನಲ್ಲಿ ಲಸಿಕೆ ನೀಡಲು ತಿಂಗಳು ಪೂರ್ತಿ ಅಭಿಯಾನವೊಂದಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಈ ಮೂಲಕ ಮೊದಲನೇ ಹಾಗೂ ಎರಡನೇ ಚುಚ್ಚುಮದ್ದುಗಳನ್ನು ಪಡೆಯಬೇಕಿರುವ ಮಂದಿ ಮುಂದೆ ಬರುವಂತೆ ಉತ್ತೇಜನ ನೀಡಲು ಮುಂದಾಗಿದೆ.

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ನೆರವು

“ಕೆಲಸ ಮಾಡುವ ಜಾಗಗಳಲ್ಲೇ ಲಸಿಕೆ ನೀಡುವ ವ್ಯವಸ್ಥೆಗಳ ಮೂಲಕ ತಮ್ಮ ಡೋಸ್‌ಗಳನ್ನು ಪಡೆಯಬೇಕಿರುವ ಮಂದಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ’ನಾನು ಪೂರ್ಣ ಲಸಿಕೆ ಪಡೆದಿದ್ದೇನೆ, ನೀವು ಸಹ ಪಡೆದಿದ್ದೀರಾ?’ ಎಂದು ಬರೆದಿರುವ ಬ್ಯಾಡ್ಜ್‌ಗಳನ್ನು ನೀಡುವ ಮೂಲಕ ಅವರ ಸಹೋದ್ಯೋಗಿಗಳೂ ಸಹ ಚುಚ್ಚುಮದ್ದುಗಳನ್ನು ಪಡೆದುಕೊಳ್ಳಲು ಉತ್ತೇಜನ ನೀಡಲಾಗುವುದು,” ಎಂದು ಮೂಲವೊಂದು ತಿಳಿಸಿದೆ.

ಸಂಪೂರ್ಣವಾಗಿ ಲಸಿಕೆ ಪಡೆದ ಮಂದಿಗೆ ಲಕ್ಕಿ ಡ್ರಾ ಕಾರ್ಯಕ್ರಮಗಳ ಮೂಲಕ ಅಡುಗೆ ಮನೆ ವಸ್ತುಗಳು, ರೇಷನ್ ಕಿಟ್, ಪ್ರಯಾಣದ ಪಾಸ್‌ಗಳು, ನಗದು ಬಹುಮಾನಗಳನ್ನು ನೀಡುವ ಮೂಲಕ ಕೋವಿಡ್ ಲಸಿಕೆ ಪಡೆಯಲು ಮೀನಾಮೇಷ ಎಣಿಸುತ್ತಿರುವ ಮಂದಿಯನ್ನು ಲಸಿಕಾ ಕೇಂದ್ರಗಳತ್ತ ಸೆಳೆಯಲು ಸಹ ಚಿಂತನೆ ನಡೆಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...