alex Certify BREAKING: LPG ಸಿಲಿಂಡರ್ ಸ್ಪೋಟ; ಒಂದೇ ಕುಟುಂಬದ ಐವರಿಗೆ ಗಂಭೀರ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: LPG ಸಿಲಿಂಡರ್ ಸ್ಪೋಟ; ಒಂದೇ ಕುಟುಂಬದ ಐವರಿಗೆ ಗಂಭೀರ ಗಾಯ

ಬೆಳಗಾವಿ: ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ನಗರದ ಬಸವನಗಲ್ಲಿಯಲ್ಲಿ ಘಟನೆ ನಡೆದಿದೆ.

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಹಚ್ಚುವಾಗ ಲೀಕ್ ಆಗಿ ಸ್ಪೋಟ ಸಂಭವಿಸಿದೆ. ಒಂದೇ ಕುಟುಂಬದ ಐವರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಲಲಿತ ಭಟ್(48), ಮೋಹನ ಭಟ್(56), ಕಮಲಾಕ್ಷಿ ಭಟ್(80) ಹೇಮಂತ್ ಭಟ್(27), ಗೋಪಿಕೃಷ್ಣ ಭಟ್(84) ಗಾಯಗೊಂಡಿದ್ದಾರೆ. ಖಡೇ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗ್ಯಾಸ್ ಲೀಕ್ ಆಗಿದ್ದನ್ನು ಗಮನಿಸದೇ ಸ್ಟವ್ ಹಚ್ಚಲು ಲೈಟರ್ ಆನ್ ಮಾಡ್ತಿದ್ದಂತೆ ಬೆಂಕಿ ತಗುಲಿ ಸ್ಪೋಟ ಸಂಭವಿಸಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...