alex Certify ಪ್ರಿಯಕರನ ನಂಬಿ ಗಂಡನಿಗೆ ಡೈವೋರ್ಸ್ ಕೊಟ್ಟ ಯುವತಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನ ನಂಬಿ ಗಂಡನಿಗೆ ಡೈವೋರ್ಸ್ ಕೊಟ್ಟ ಯುವತಿಗೆ ಬಿಗ್ ಶಾಕ್

ಕೋಲಾರ: ಪ್ರಿಯಕರನ ನಂಬಿ ಪತಿಗೆ ವಿಚ್ಛೇದನ ನೀಡಿದ ಯುವತಿ ಅತ್ತ ಗಂಡನೂ ಇಲ್ಲದೇ, ಇತ್ತ ಪ್ರಿಯಕರನೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಿಯಕರನ ಮನೆ ಎದುರು ಕಳೆದ ಎರಡು ದಿನಗಳಿಂದ ನ್ಯಾಯಕ್ಕಾಗಿ ಪ್ರತಿಭಟನೆ ಕೈಗೊಂಡಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ದೊಡ್ಡಮಲ್ಲೆ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಯುವತಿ ಹಾಗೂ ಕಿರಣ್ ಐದಾರು ವರ್ಷಗಳಿಂದ ಪ್ರೀತಿಸಿದ್ದು, ಯುವತಿ ಮನೆಯವರು ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಹೀಗಿದ್ದರೂ ಪ್ರಿಯಕರನೊಂದಿಗೆ ಯುವತಿ ಸಂಪರ್ಕದಲ್ಲಿದ್ದಳು.

ಗಂಡನಿಗೆ ಡೈವೋರ್ಸ್ ಕೊಟ್ಟು ಬಂದರೆ ಮದುವೆಯಾಗುವುದಾಗಿ ಕಿರಣ್ ಹೇಳಿದ್ದಾನೆ. ಅಂತೆಯೇ ಗಂಡನಿಗೆ ವಿಚ್ಛೇದನ ನೀಡಿದ್ದು, ಈಗ ತನ್ನ ಮನೆಯವರು ಒಪ್ಪುತ್ತಿಲ್ಲ ಎಂದು ಕಿರಣ್ ಮದುವೆಯಾಗಲು ನಿರಾಕರಿಸಿದ್ದಾನೆ. ನೊಂದ ಯುವತಿ ಆತನ ಮನೆ ಎದುರು ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...