alex Certify ರಸ್ತೆ ಮಧ್ಯೆ ಬಂದು ಸಂಚಾರಕ್ಕೆ ಅಡ್ಡಿಪಡಿಸಿ ಪೊಲೀಸರ ಸುಸ್ತು ಮಾಡಿದ ‘ಲವರ್​ ಬಾಯ್​’….! ಅಷ್ಟಕ್ಕೂ ಯಾರೀತ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯೆ ಬಂದು ಸಂಚಾರಕ್ಕೆ ಅಡ್ಡಿಪಡಿಸಿ ಪೊಲೀಸರ ಸುಸ್ತು ಮಾಡಿದ ‘ಲವರ್​ ಬಾಯ್​’….! ಅಷ್ಟಕ್ಕೂ ಯಾರೀತ ?

ಹಳ್ಳಿ ಪ್ರದೇಶಗಳಲ್ಲಿ ಮಾತ್ರವಲ್ಲದೇ ಕೆಲವೊಂದು ನಗರಗಳಲ್ಲಿಯೂ ರಸ್ತೆ ಮಧ್ಯೆ ದನಗಳು ಅಡ್ಡಿ ಬಂದು ವಾಹನ ಸಂಚಾರಕ್ಕೆ ತೊಂದರೆ ಮಾಡುವುದುಂಟು. ಆದರೆ ದೂರದ ಸ್ಕಾಟ್‌ಲ್ಯಾಂಡ್‌ನ ಈ ಗೂಳಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ.

ಮೈದಾನದಿಂದ ತಪ್ಪಿಸಿಕೊಂಡ ನಂತರ, ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿನ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಈ ಗೂಳಿ ನುಗ್ಗಿ ಸಂಚಾರ ಅಸ್ತವ್ಯಸ್ತತೆಯನ್ನು ಉಂಟುಮಾಡಿತ್ತು. ಇದನ್ನು ಅಲ್ಲಿಂದ ಓಡಿಸಲು ಪೊಲೀಸರು ಹರಸಾಹಸ ಮಾಡಬೇಕಾಗಿ ಬಂತು. ಎಲ್ಲಾ ವಾಹನ ಸವಾರರನ್ನು ಕೆಲವು ಕ್ಷಣ ರಸ್ತೆಯ ಮೇಲೆಯೇ ನಿಲ್ಲಿಸಲಾಗಿತ್ತು. ಮಾತ್ರವಲ್ಲದೇ ಈ ರಸ್ತೆಯಲ್ಲಿ ಬರುವುದನ್ನು ತಪ್ಪಿಸುವಂತೆ ರೇಡಿಯೋಗಳಲ್ಲಿ ಅನೌನ್ಸ್​ಮೆಂಟ್​ ಕೂಡ ಮಾಡಲಾಗಿತ್ತು !

ಇಂಥದ್ದೊಂದು ಗೂಳಿಯ ರಾದ್ಧಾಂತ ಭಾರಿ ಸುದ್ದಿಯಾಗಲು ಕಾರಣ ಇದರ ಹೆಸರು. ಅಷ್ಟಕ್ಕೂ ಇದರ ಹೆಸರು ಏನೆಂದರೆ ʼಲವರ್​ ಬಾಯ್ʼ ​! ವೈರಲ್​ ಆಗಿರುವ ಚಿತ್ರದಲ್ಲಿ, ಗೂಳಿಯು ರಸ್ತೆಯ ಬದಿಯಲ್ಲಿ ಮೇಯುತ್ತಿರುವುದನ್ನು ಕಾಣಬಹುದು. ನಂತರ ಪೊಲೀಸ್​ ಪಡೆ ಬಂದು ಅದನ್ನು ಅಲ್ಲಿಂದ ಓಡಿಸಿದರು. ಕೊನೆಗೂ ರಸ್ತೆ ಸಂಚಾರ ಸುಗಮಗೊಳಿಸಲಾಯಿತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...