alex Certify ಹೊಲದಲ್ಲೇ ಬಯಲಾಯ್ತು ಅಕ್ರಮ ಸಂಬಂಧ: ಪ್ರಿಯಕರನೊಂದಿಗೆ ಸಲ್ಲಾಪದ ವೇಳೆಯಲ್ಲೇ ಸಿಕ್ಕಿಬಿದ್ದ ವಿವಾಹಿತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಲದಲ್ಲೇ ಬಯಲಾಯ್ತು ಅಕ್ರಮ ಸಂಬಂಧ: ಪ್ರಿಯಕರನೊಂದಿಗೆ ಸಲ್ಲಾಪದ ವೇಳೆಯಲ್ಲೇ ಸಿಕ್ಕಿಬಿದ್ದ ವಿವಾಹಿತೆ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುರುಕಟನಾಳ ಗ್ರಾಮದಲ್ಲಿ ಪ್ರಿಯಕರನೊಂದಿಗೆ ಸಲ್ಲಾಪದಲ್ಲಿದ್ದ ವಿವಾಹಿತೆ ಸಿಕ್ಕಿಬಿದ್ದಿದ್ದು ಇಬ್ಬರಿಗೆ ವಿಚಿತ್ರ ಶಿಕ್ಷೆ ನೀಡಲಾಗಿದೆ.

ರಾಮದುರ್ಗ ತಾಲ್ಲೂಕಿನ ಚುಂಚನೂರು ಗ್ರಾಮದ ಯುವಕ ಮತ್ತು ಮುರುಕಟನಾಳ ಗ್ರಾಮದ ವಿವಾಹಿತೆ ಹೊಲದಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಕುಟುಂಬದವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗಂಡನ ಕಣ್ಣುತಪ್ಪಿಸಿ ಪ್ರಿಯಕರನೊಂದಿಗೆ ಸಲ್ಲಾಪದಲ್ಲಿದ್ದ ಮಹಿಳೆಯನ್ನು ಕುಟುಂಬದವರೇ ಹಿಡಿದು ಟ್ರ್ಯಾಕ್ಟರಿಗೆ ಕಟ್ಟಿಹಾಕಿದ್ದಾರೆ.

ಸಾರ್ವಜನಿಕವಾಗಿ ಕಟ್ಟಿಹಾಕಿ ಶಿಕ್ಷೆ ನೀಡಿದ್ದಾರೆ. ಸರಸದ ವೇಳೆಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಇಬ್ಬರನ್ನು ಕಟ್ಟಿಹಾಕಿ ಶಿಕ್ಷೆ ನೀಡಲಾಗಿದೆ. ನಂತರ ಎಚ್ಚರಿಕೆ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ. ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...