alex Certify ಪ್ರೀತಿಯ ಬಲೆಗೆ ಬಿದ್ದವಳ ಮೇಲೆ ನಿರಂತರ ಅತ್ಯಾಚಾರ, ನಗ್ನ ಫೋಟೋ ತೋರಿಸಿ 35 ಲಕ್ಷ ಕಸಿದ ಪ್ರಿಯಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಯ ಬಲೆಗೆ ಬಿದ್ದವಳ ಮೇಲೆ ನಿರಂತರ ಅತ್ಯಾಚಾರ, ನಗ್ನ ಫೋಟೋ ತೋರಿಸಿ 35 ಲಕ್ಷ ಕಸಿದ ಪ್ರಿಯಕರ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ, ವಂಚಿಸಿದ ಆರೋಪಿಯ ವಿರುದ್ಧ ಯುವತಿ ದೂರು ನೀಡಿದ್ದು, ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ

ಮೈಸೂರು ಜಿಲ್ಲೆ ನಂಜನಗೂಡು ಮೂಲದ ಯುವತಿಗೆ ಮಂಗಳೂರಿನ ಕೊಣಾಜೆ ಮೂಲದ ಮಹಮ್ಮದ್ ಅಜ್ವಾನ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಮದುವೆಯಾಗಲು ನಿರಾಕರಿಸಿದ್ದಾನೆ. ಪ್ರೀತಿಯ ನಾಟಕವಾಡಿದ್ದ ಆರೋಪಿ ಆಕೆಯ ಬೆತ್ತಲೆ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ 35 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಮಂಗಳೂರಿನ ಮಹಿಳಾ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾಳೆ.

ಮುಡಿಪು ನಿವಾಸಿಯಾಗಿರುವ ಆರೋಪಿ ಮನೆ ಹುಡುಕಿಕೊಂಡು ಯುವತಿ ಬಂದಿದ್ದ ವೇಳೆ ಆತನ ಕುಟುಂಬದವರು ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅವರು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...