alex Certify ಲವ್, ಸೆಕ್ಸ್, ದೋಖಾ: ಮದುವೆಯಾಗುವುದಾಗಿ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪ್ರಿಯಕರನ ವಿರುದ್ಧ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್, ಸೆಕ್ಸ್, ದೋಖಾ: ಮದುವೆಯಾಗುವುದಾಗಿ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪ್ರಿಯಕರನ ವಿರುದ್ಧ ದೂರು

ಕೊಪ್ಪಳ: ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಪ್ರಿಯಕರ ಕೈಕೊಟ್ಟ ಘಟನೆ ನಡೆದಿದ್ದು, ಕೊಪ್ಪಳ ಜಿಲ್ಲೆಯಲ್ಲೊಂದು ಲವ್, ಸೆಕ್ಸ್, ದೋಖಾ ಪ್ರಕರಣ ದಾಖಲಾಗಿದೆ.

ಬಳ್ಳಾರಿ ಮೂಲದ ಯುವತಿಗೆ ಕಾರಟಗಿ ತಾಲೂಕಿನ ನಿವಾಸಿಯಾಗಿರುವ ವಿರೂಪಾಕ್ಷ ಎಂಬುವನು ವಂಚಿಸಿದ ಆರೋಪ ಕೇಳಿಬಂದಿದೆ. ಈ ಮೊದಲು ಯುವತಿಗೆ ಬಾಲ್ಯವಿವಾಹ ಆಗಿತ್ತು. ಬಾಲ್ಯವಿವಾಹವನ್ನು ಧಿಕ್ಕರಿಸಿ ವಿರುಪಾಕ್ಷನ ಜೊತೆಗೆ ಪ್ರೀತಿಸಿದ್ದಾಳೆ. ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದ ವಿರೂಪಾಕ್ಷ ಯುವತಿ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದ.

ಮದುವೆಯಾಗುವುದಾಗಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡ ಆರೋಪಿ ಬಳಿಕ ಯುವತಿ ಜೊತೆಗೆ ಮದುವೆಯಾಗಲು ನಿರಾಕರಿಸಿದ್ದಾನೆ ಎನ್ನಲಾಗಿದೆ. ಬೇರೆ ಯುವತಿಯೊಂದಿಗೆ ವಿರೂಪಾಕ್ಷ ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ. ನ್ಯಾಯಕ್ಕಾಗಿ ಯುವತಿ ಗಂಗಾವತಿ ನಗರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...