alex Certify ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ನೀಡಲಾಗಿದೆ ಈ ಮಹತ್ವದ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ನೀಡಲಾಗಿದೆ ಈ ಮಹತ್ವದ ಸಲಹೆ

ಈಗಂತು ಆನ್​ಲೈನ್​ ಶಿಕ್ಷಣದ್ದೇ ಕಾಲ. ಈ ಹಿಂದೆ ಶಾಲಾ ತರಗತಿಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮಕ್ಕಳಿಗೆ ಮಧ್ಯಾಹ್ನ ಊಟಕ್ಕೆ ವಿರಾಮವನ್ನ ನೀಡಲಾಗ್ತಿತ್ತು. ಇದೇ ಊಟದ ವಿರಾಮದ ವಿಚಾರವಾಗಿ ನಡೆಸಲಾದ ಅಧ್ಯಯನವನ್ನ ಜಾಮಾ ನೆಟ್​ವರ್ಕ್ ಓಪನ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಈ ಅಧ್ಯಯನದ ಪ್ರಕಾರ ಮಕ್ಕಳಿಗೆ ಹಸಿ ತರಕಾರಿ ಹಾಗೂ ಹಣ್ಣುಗಳು ಅಷ್ಟೊಂದು ಇಷ್ಟ ಆಗದೇ ಇದ್ದರೂ ಸಹ ಊಟದ ವಿರಾಮದ ಅವಧಿಯನ್ನ ಹೆಚ್ಚಿಸಿದಲ್ಲಿ ಮಕ್ಕಳು ಆರೋಗ್ಯಯುತ ಆಹಾರವನ್ನೂ ಸೇವಿಸುತ್ತಾರೆ ಎಂದು ಹೇಳಲಾಗಿದೆ.

ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಅಧ್ಯಯನದಲ್ಲಿ ಮಕ್ಕಳಲ್ಲಿ ಪೌಷ್ಟಿಕಾಂಶದ ಅಂಶವನ್ನ ಹೆಚ್ಚಿಸಬೇಕು ಅಂದರೆ ಶಾಲೆಗಳಲ್ಲಿ ಊಟದ ವಿರಾಮದ ಅವಧಿಯನ್ನ ಹೆಚ್ಚಿಸಬೇಕು ಎಂದು ಹೇಳಿದ್ದಾರೆ.

ಊಟದ ಅವಧಿಯಲ್ಲಿ ಮಕ್ಕಳು ಊಟಕ್ಕಾಗಿ ಸರದಿಯಲ್ಲಿ ನಿಲ್ಲುತ್ತಾರೆ. ಈ ಸಂದರ್ಭಗಳಲ್ಲಿ ಅವರಿಗೆ ಕೊಟ್ಟ ಅವಧಿಯಲ್ಲಿ ಹೆಚ್ಚು ಪಾಲು ಊಟಕ್ಕಾಗಿ ಕಾಯುವುದರಲ್ಲೇ ಹೋಗಿ ಬಿಡಬಹುದು. ಹೀಗಾಗಿ ಮಕ್ಕಳಿಗೆ ಊಟದ ಅವಧಿಯನ್ನೇ ಜಾಸ್ತಿ ಮಾಡಿದಲ್ಲಿ ಅವರು ತರಕಾರಿ ಹಣ್ಣುಗಳನ್ನೂ ಸೇವನೆ ಮಾಡುತ್ತಾರೆ ಎಂದು ಸಹಾಯಕ ಉಪನ್ಯಾಸಕಿ ಪ್ರೆಸ್ಕೊಟ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...