alex Certify ಮೈಯೆಲ್ಲಾ ಹರಡಿದ ಬಟ್ಟೆಯ ನೀಲಿ ಬಣ್ಣ: ಕ್ರಿಸ್​ಮಸ್​ ಪಾರ್ಟಿಯಲ್ಲಿ ಮಹಿಳೆ ಭಾರಿ ವೈರಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಯೆಲ್ಲಾ ಹರಡಿದ ಬಟ್ಟೆಯ ನೀಲಿ ಬಣ್ಣ: ಕ್ರಿಸ್​ಮಸ್​ ಪಾರ್ಟಿಯಲ್ಲಿ ಮಹಿಳೆ ಭಾರಿ ವೈರಲ್…!

My holiday party outfit stained my skin — everyone called me a Smurf

ಮಹಿಳೆ ತನ್ನ ಕ್ರಿಸ್ಮಸ್ ಪಾರ್ಟಿಯಲ್ಲಿ ‘ಅನಾಹುತಕಾರಿ’ಯಾಗಿ ವೈರಲ್​ ಆಗಿರುವ ಘಟನೆ ನಡೆದಿದೆ. ಕ್ರಿಸ್​ಮಸ್ಗೆಂದು ಖರೀದಿ ಮಾಡಿದ ಬಟ್ಟೆಯ ಬಣ್ಣ ಬಿಟ್ಟುಕೊಂಡು ಮೈತುಂಬಾ ಹರಡಿ ಪಾರ್ಟಿಯಲ್ಲಿ ವಿಚಿತ್ರ ಸನ್ನಿವೇಶ ಎದುರಿಸಿದ್ದು, ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾಳೆ.

ಲಂಡನ್‌ನ 25 ವರ್ಷದ ಬೆತ್ ಗ್ರೇ ಇಂಥದ್ದೊಂದು ವಿಚಿತ್ರ ಅನುಭವಿಸಿದಾಕೆ. ತಮ್ಮ ಚರ್ಮವನ್ನು ನೀಲಿ ಮಾಡಿದ ಡ್ರೀಮ್ ಡೇಜ್ ಕೋಬಾಲ್ಟ್ ಕಂಪೆನಿಗೆ ಧನ್ಯವಾದ ಹೇಳಿದ್ದಾಳೆ! ಇದಕ್ಕೆ ಕಾರಣ ಈ ರೀತಿ ವಿಚಿತ್ರವಾಗಿ ತನ್ನನ್ನು ಕಾಣುವಂತೆ ಮಾಡಿದುದಕ್ಕೆ ಇಷ್ಟೆಲ್ಲಾ ಪ್ರಸಿದ್ಧಿ ಪಡೆದೆ ಎಂದು!

ಆಗಿದ್ದೇನೆಂದರೆ ಬೆತ್​ ಗ್ರೇ ನೀಲಿ ಬಣ್ಣದ ಡ್ರೆಸ್​ ಖರೀದಿ ಮಾಡಿದ್ದರು. ನೀಲಿ ಗರಿಗಳ ಮೇಲ್ಭಾಗವನ್ನು ಅದು ಹೊಂದಿತ್ತು. ಆದರೆ ಆ ಬಟ್ಟೆಯ ಬಣ್ಣ ನಿಧಾನವಾಗಿ ಬಿಡುತ್ತಿದ್ದಂತೆಯೇ ಮೈಗೆಲ್ಲಾ ಹರಡಿದೆ. ಆರಂಭದಲ್ಲಿ ಅದು ಕಂಕುಳ ತುದಿ ಹರಡಿದೆ. ಇದನ್ನು ಬೆತ್​ ಗ್ರೇ ಗಮನಿಸಿರಲಿಲ್ಲ. ಆಕೆಯ ಸ್ನೇಹಿತೆ ನಿನ್ನ ಕಂಕುಳನ್ನು ನೋಡು ಎಂದಾಗ ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು ಎಂದು ಬೆತ್​ ಗ್ರೇ ಹೇಳಿಕೊಂಡಿದ್ದಾಳೆ.

ನಂತರ ತನ್ನ ಇಡೀ ಶರೀರ ನೀಲಿ ಬಣ್ಣದ್ದಾಗತೊಡಗಿತು. ಇದರಿಂದ ಜನರು ನನ್ನನ್ನು ವಿಚಿತ್ರವಾಗಿಯೂ, ಕುತೂಹಲವಾಗಿಯೂ ನೋಡುತ್ತಿದ್ದರು ಎಂದು ತನ್ನ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದಾಳೆ.

ಇಷ್ಟೆಲ್ಲಾ ಆದ ಮೇಲೆ ಆ ಡ್ರೆಸ್​ ಅನ್ನು ವಾಪಸ್​ ಕೊಡಲು ಬೆತ್​ ಗ್ರೇ ನಿರ್ಧರಿಸಿದ್ದು, ಅಂಗಡಿ ಕೂಡ ಕ್ಷಮೆಯಾಚಿಸಿದೆ. ಆದರೆ ಇದರಿಂದಾಗಿ ಬೆತ್​ ಗ್ರೇ ಸುದ್ದಿ ಮಾತ್ರ ಭಾರಿ ವೈರಲ್​ ಆಗಿದೆ.

The marks were still there the morning after

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...