alex Certify BIG NEWS: ಭಾರತ ಸೇರಿದಂತೆ ಕೊರೊನಾ ಪೀಡಿತ ರಾಷ್ಟ್ರಗಳಿಗೆಂದೇ ಲಂಡನ್​ ಏರ್​ಪೋರ್ಟ್ ನಲ್ಲಿ ಪ್ರತ್ಯೇಕ ಟರ್ಮಿನಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತ ಸೇರಿದಂತೆ ಕೊರೊನಾ ಪೀಡಿತ ರಾಷ್ಟ್ರಗಳಿಗೆಂದೇ ಲಂಡನ್​ ಏರ್​ಪೋರ್ಟ್ ನಲ್ಲಿ ಪ್ರತ್ಯೇಕ ಟರ್ಮಿನಲ್

ಲಂಡನ್​​ನ ಪ್ರಸಿದ್ಧ ಹಿಥ್ರೋ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಕೊರೊನಾ ಕೇಸ್​ಗಳ ಹೊಂದಿರುವ ರಾಷ್ಟ್ರಗಳಿಗಾಗಿ ಹೊಸ ಟರ್ಮಿನಲ್​ ಒಂದನ್ನ ತೆರೆಯಲಾಗಿದೆ. ಬ್ರಿಟನ್​ ಕೆಂಪು ಪಟ್ಟಿಯಲ್ಲಿ ಗುರುತಿಸಿದ್ದ ಭಾರತ ಸೇರಿದಂತೆ ಇತರೆ ಕೆಲ ರಾಷ್ಟ್ರಗಳಿಗೆ ಹೊಸ ಟರ್ಮಿನಲ್​ ತೆರೆಯಲಾಗಿದೆ.

ಈ ಕೆಂಪು ಪಟ್ಟಿಯಲ್ಲಿ ನಮೂದಾಗಿರುವ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರು ನೇರವಾಗಿ ಟರ್ಮಿನಲ್ 3ಗೆ ಬಂದಿಳಿಯಲಿದ್ದಾರೆ. ಬಳಿಕ ಇವರನ್ನ ಪ್ರಯಾಣಿಕರ ಸ್ವಂತ ಖರ್ಚಿನಲ್ಲಿ ಸರ್ಕಾರದಿಂದ ಅನುಮೋದಿತಗೊಂಡ ಕ್ವಾರಂಟೈನ್​ ಕೊಠಡಿಗಳಲ್ಲಿ ಇರಿಸಲಾಗುತ್ತದೆ.

ಕೆಂಪು ಪಟ್ಟಿಯಲ್ಲಿ ಗುರುತಿಸಿಕೊಂಡ ದೇಶಗಳಿಂದ ಬರುವ ಪ್ರಯಾಣಿಕರು ಹಾಗೂ ಏರ್​ಪೋರ್ಟ್​ನಲ್ಲಿ ಉಂಟಾಗ್ತಿರುವ ಜನಸಂದಣಿಯ ಬಗ್ಗೆ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಹೊಸ ಟರ್ಮಿನಲ್​ನ್ನು ತೆರೆಯುವ ನಿರ್ಧಾರ ಕೈಗೊಳ್ಳಲಾಗಿದೆ.

ಬ್ರಿಟನ್​ ಸರ್ಕಾರ ಪಟ್ಟಿ ಮಾಡಿರುವ ಈ ರೆಡ್​​ ಲಿಸ್ಟ್​ನಲ್ಲಿ ಭಾರತ, ಬ್ರೆಜಿಲ್​ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ಒಟ್ಟು 43 ದೇಶಗಳು ಇವೆ. ಈ ಎಲ್ಲಾ ದೇಶದ ಪ್ರಜೆಗಳು ಕಡ್ಡಾಯವಾಗಿ ಕ್ವಾರಂಟೈನ್​ಗೆ ಒಳಗಾಗಲೇಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...