alex Certify ವರುಣ್ ಗಾಂಧಿಗೆ ಬಿಜೆಪಿ ಶಾಕ್: ನಟಿ ಕಂಗನಾಗೆ ಲೋಕಸಭೆ ಚುನಾವಣೆ ಟಿಕೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರುಣ್ ಗಾಂಧಿಗೆ ಬಿಜೆಪಿ ಶಾಕ್: ನಟಿ ಕಂಗನಾಗೆ ಲೋಕಸಭೆ ಚುನಾವಣೆ ಟಿಕೆಟ್

ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ 5ನೇ ಪಟ್ಟಿ ಪ್ರಕಟಿಸಿದೆ. 111 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ.

ಸಂಸದ ವರುಣ್ ಗಾಂಧಿಯವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ವರುಣ್ ಗಾಂಧಿ ಪ್ರತಿನಿಧಿಸುತ್ತಿರುವ ಫಿಲಿಬಿಟ್ ಕ್ಷೇತ್ರಕ್ಕೆ ಉತ್ತರ ಪ್ರದೇಶ ಸಚಿವ ಜಿತಿನ್ ಪ್ರಸಾದ್ ಅವರ ಹೆಸರು ಘೋಷಣೆ ಮಾಡಲಾಗಿದೆ. ಮೇನಕಾ ಗಾಂಧಿ ಸುಲ್ತಾನ್ ಪುರ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ.

ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ‘ರಾಮಾಯಣ’ ಧಾರವಾಹಿಯಲ್ಲಿ ಶ್ರೀ ರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ಸ್ಪರ್ಧಿಸಲಿದ್ದಾರೆ. ಅರುಣ್ ಗೋವಿಲ್ ಗೆ ಮೀರಠ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಗೆ ಸಂಬಲ್ಪುರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...