alex Certify ಪುಟ್ಟ ಬಾಲೆಯ ಜಿಮ್ನಾಸ್ಟಿಕ್ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲೆಯ ಜಿಮ್ನಾಸ್ಟಿಕ್ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು: ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳ ಜಿಮ್ನಾಸ್ಟಿಕ್ ಕೌಶಲ್ಯವನ್ನು ಕಂಡ ನೆಟ್ಟಿಗರು ವಿಸ್ಮಯಕ್ಕೊಳಗಾಗಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಬಾಲಕಿಯು ಬಹಳ ಸರಳವಾಗಿ ಜಿಮ್ನಾಸ್ಟಿಕ್ ಮಾಡಿರುವುದು ಅನೇಕರನ್ನು ಬೆರಗುಗೊಳಿಸಿದೆ.

ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಅವರು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜಿಮ್ ಅಖಾಡದಲ್ಲಿ ಪುಟ್ಟ ಬಾಲೆ ತನ್ನ ಲೆಗ್ ಕಿಕ್ ಮಾಡಿದ್ದಾಳೆ. ರಬ್ಬರ್ ಗೊಂಬೆ ತರಹ ಪಲ್ಟಿಗಳನ್ನು ಮಾಡಿದ್ದಾಳೆ. ವಿಡಿಯೋ ನೋಡುತ್ತಿದ್ರೆ ಇವಳೇನು ಗೊಂಬೆಯೋ ಅಥವಾ ಬಾಲಕಿಯೋ ಅಂತಾ ಸಂಶಯ ಮೂಡುತ್ತದೆ.

ಬಾಲಕಿಯ ಅದ್ಭುತ ಪ್ರತಿಭೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. 246k ಮಂದಿ ವಿಡಿಯೋ ವೀಕ್ಷಿಸಿದ್ದು, ಬಾಲಕಿಯ ಪ್ರತಿಭೆ ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಕಠಿಣ ತರಬೇತಿಯಿಂದ ಪುಟ್ಟ ಬಾಲೆ ಬಹಳ ದೊಡ್ಡಮಟ್ಟದ ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಅಬ್ಬಾ ಎಂತಹ ಪ್ರತಿಭಾವಂತ ಬಾಲಕಿ ಈಕೆ ಅಂತೆಲ್ಲಾ ಪ್ರಶಂಸಿದ್ದಾರೆ. ಇನ್ನೂ ಕೆಲವರು, ಇಂಥದ್ದನ್ನೆಲ್ಲಾ ಮಾಡಲು ಬಾಲಕಿ ತುಂಬಾ ಚಿಕ್ಕವಳಲ್ಲವೇ ಅಂತಾ ಪ್ರಶ್ನಿಸಿದ್ದಾರೆ.

— Ankita Sharma IPS (@ankidurg) November 27, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...