ಪುಟ್ಟ ಬಾಲಕಿ ಮತ್ತು ಅವಳ ಸಾಕು ನಾಯಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಳೆಯಿಂದ ತನ್ನ ನಾಯಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಬಾಲಕಿಯ ವಿಡಿಯೋ ಸಹಾನುಭೂತಿಯನ್ನು ತೋರಿಸುತ್ತದೆ. ಮಳೆಯ ನಡುವೆ ಕೊಡೆ ಹಿಡಿದು ನಿಂತಿದ್ದ ಬಾಲಕಿ, ತನ್ನ ನಾಯಿಯು ಒದ್ದೆಯಾಗಬಾರದೆಂದು ಅದಕ್ಕೆ ಕೊಡೆ ಹಿಡಿದಿದ್ದಾಳೆ.
ಈ ಮುದ್ದಾದ ವಿಡಿಯೋವನ್ನು ತನ್ಸು ಯೆಗೆನ್ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು 6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ರೈನ್‌ಕೋಟ್ ಧರಿಸಿರುವ ಪುಟ್ಟ ಬಾಲಕಿ ಮಳೆಯಿಂದ ರಕ್ಷಿಸಲು ತನ್ನ ನಾಯಿಯನ್ನು ಹಿಂಬಾಲಿಸಿದ್ದಾಳೆ. ಭಾರಿ ಮಳೆಯಿಂದ ತನ್ನ ಮುದ್ದು ನಾಯಿಯನ್ನು ರಕ್ಷಿಸಲು ಪುಟ್ಟ ಪೋರಿ ಅದಕ್ಕೆ ಕೊಡೆ ಹಿಡಿದಿದ್ದಾಳೆ.
ಈ ವಿಡಿಯೋ ಹೃದಯಸ್ಪರ್ಶಿಯಾಗಿದ್ದು, ನೆಟ್ಟಿಗರ ಮನಗೆದ್ದಿದೆ. ಕಾಮೆಂಟ್‌ಗಳ ವಿಭಾಗವು ಹೃದಯ ಮತ್ತು ಪ್ರೀತಿಯ ಎಮೋಜಿಗಳಿಂದ ತುಂಬಿದೆ.