alex Certify ಹುಲಿ ವೇಶಧಾರಿಯೊಂದಿಗೆ ಪುಟ್ಟ ಬಾಲಕಿಯಿಂದ ಸಖತ್‌ ಸ್ಟೆಪ್;‌ ವಿಡಿಯೋ ನೋಡಿ ತಲೆದೂಗಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿ ವೇಶಧಾರಿಯೊಂದಿಗೆ ಪುಟ್ಟ ಬಾಲಕಿಯಿಂದ ಸಖತ್‌ ಸ್ಟೆಪ್;‌ ವಿಡಿಯೋ ನೋಡಿ ತಲೆದೂಗಿದ ನೆಟ್ಟಿಗರು

ಚಿಕ್ಕ ಹುಡುಗಿಯೊಬ್ಬಳು ಬೀದಿಯಲ್ಲಿ ಕಲಾವಿದರೊಂದಿಗೆ ಪೂರ್ವಸಿದ್ಧತೆಯಿಲ್ಲದ ಸ್ಟೆಪ್​ ಹಾಕುವ ವಿಡಿಯೋವೊಂದು ನೆಟ್ಟಿಗರು ತಲೆದೂಗುವಂತೆ ಮಾಡಿದೆ.

ಕರ್ನಾಟಕದ ಉಡುಪಿಯ ಜಾನಪದ ನೃತ್ಯ ಹುಲಿ ಕುಣಿತ ಪ್ರದರ್ಶಿಸುವ ಕೆಲವು ಕಲಾವಿದರೊಂದಿಗೆ 3 ರಿಂದ 4 ವರ್ಷ ಹುಡುಗಿಯೊಬ್ಬಳು ಸೇರಿಕೊಂಡು ಸದ್ದು ಮಾಡಿದ್ದಾಳೆ.

ವಿಡಿಯೋದಲ್ಲಿ ಮೊದಲು ಮಹಿಳೆಯೊಬ್ಬರು ಪುಟ್ಟ ಹುಡುಗಿಯ ಜೊತೆ ಕಾಣಿಸಿಕೊಳ್ಳುತ್ತಾರೆ, ಅವರು ಹುಲಿವೇಷ ಧಾರಿಗೆ ಹಾರ ಹಾಕಿ ಗೌರವಿಸುತ್ತಾರೆ. ನಂತರ ಆ ಕಲಾವಿದ ತನ್ನೊಂದಿಗೆ ನೃತ್ಯ ಮಾಡಲು ಪುಟ್ಟ ಬಾಲಕಿಯನ್ನು ಆಹ್ವಾನಿಸುತ್ತಾರೆ, ಕುಣಿಯುವಂತೆ ಪ್ರೋತ್ಸಾಹಿಸುತ್ತಾರೆ. ಕೆಲವು ಸೆಕೆಂಡುಗಳ ನಂತರ, ಹುಡುಗಿ ಆ ನೃತ್ಯಗಾರರನ್ನು ಅನುಕರಿಸಿ ಉತ್ಸಾಹದಿಂದ ಮೈ ಚಳಿ ಬಿಟ್ಟು ಬೀದಿಯಲ್ಲಿ ಕುಣಿಯುತ್ತಾಳೆ.

ಇದು ಕರಾವಳಿ ಕರ್ನಾಟಕದ ವಿಶಿಷ್ಟವಾದ ಜಾನಪದ ನೃತ್ಯವಾಗಿದೆ. ಇಲ್ಲಿ ಯುವಕರು ತಮ್ಮ ದೇಹವನ್ನು ಹಳದಿ ಮತ್ತು ಕಂದು ಬಣ್ಣದ ಪಟ್ಟೆಗಳಿಂದ ಚಿತ್ರಿಸುತ್ತಾರೆ, ಮುಖಕ್ಕೆ ಹುಲಿ ಮುಖವಾಡವನ್ನು ಧರಿಸುತ್ತಾರೆ ಮತ್ತು ಡ್ರಮ್​ಗಳ ಬಡಿತಕ್ಕೆ ನೃತ್ಯ ಮಾಡುತ್ತಾರೆ. ಈ ರೀತಿ ವೇಷದ ನೃತ್ಯವನ್ನು ದಸರಾ ಮತ್ತು ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ನಡೆಸಲಾಗುತ್ತದೆ.

ಇದು ಕಳೆದ ವರ್ಷದ ವಿಡಿಯೋ ಆಗಿದ್ದು, ನೆಟ್ಟಿಗರು ಇದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...