alex Certify ತಂದೆಯನ್ನು ಪೈಲಟ್​​ ಆಗಿ ನೋಡಿದ ಪುತ್ರಿಯ ಖುಷಿ ಕಂಡು ನೆಟ್ಟಿಗರು ಫಿದಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯನ್ನು ಪೈಲಟ್​​ ಆಗಿ ನೋಡಿದ ಪುತ್ರಿಯ ಖುಷಿ ಕಂಡು ನೆಟ್ಟಿಗರು ಫಿದಾ….!

ಪುಟ್ಟ ಬಾಲಕಿಯೊಬ್ಬಳು ವಿಮಾನಯಾನದ ವೇಳೆ ವಿಶೇಷ ಕಾರಣಕ್ಕಾಗಿ ಸಂಭ್ರಮಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ತಾನು ಹತ್ತಿದ ವಿಮಾನದಲ್ಲಿ ತಂದೆಯೇ ಪೈಲಟ್​ ಆಗಿ ಬಂದಿದ್ದಾರೆ ಎಂದು ತಿಳಿದ ತಕ್ಷಣವೇ ಬಾಲಕಿ ಸ್ವರ್ಗವೇ ಕೈಗೆಟುಕಿದಷ್ಟು ಖುಷಿಯಲ್ಲಿ ಸಂಭ್ರಮಿಸಿದ್ದಾಳೆ.

ಪುಟ್ಟ ಬಾಲಕಿಯನ್ನು ಶನಾಯಾ ಮೋತಿಹಾರ್​ ಎಂದು ಗುರುತಿಸಲಾಗಿದೆ. ಈ ಮುದ್ದು ವಿಡಿಯೋವನ್ನು ಪ್ರಿಯಾಂಕಾ ಮನೋಹತ್​​​ ಮಗಳ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ವೀವ್ಸ್​​ ಹಾಗೂ ಲೈಕ್ಸ್​ ಸಂಪಾದಿಸಿದೆ.

ನವರಾತ್ರಿಯಲ್ಲಿ ಮಾಡಿ ಸಾಬೂದಾನ ಖಿಚಡಿ

ವಿಡಿಯೋದಲ್ಲಿ ಬಾಲಕಿಯು ವಿಮಾನದಲ್ಲಿ ಆಸೀನಳಾಗಿರುತ್ತಾಳೆ, ಇದೇ ವಿಮಾನದಲ್ಲಿ ತಂದೆ ಪೈಲಟ್​​ ಧಿರಿಸಿನಲ್ಲಿ ಬಂದಿದ್ದನ್ನು ಈಕೆ ಗಮನಿಸಿದ್ದಾಳೆ. ತಂದೆಯನ್ನು ನೋಡಿದ ಬಳಿಕ ಶನಾಯಾ ಖುಷಿ ವ್ಯಕ್ತಪಡಿಸಿದ ಪರಿಯಂತೂ ವರ್ಣಿಸಲಸಾಧ್ಯ. ಜೋರಾಗಿ ಪಾಪಾ ಎಂದು ಕೂಗಿದ್ದಾಳೆ. ತಂದೆ ಪುತ್ರಿಯ ಕಡೆಗೆ ತಿರುಗಿ ನೋಡಿದ್ದಾರೆ. ಈ ಅದ್ಭುತ ಕ್ಷಣವನ್ನು ತಾಯಿ ಪ್ರಿಯಾಂಕಾ ಮೊಬೈಲ್​ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅಂದಹಾಗೆ ಈ ವಿಡಿಯೋ ನೋಡಿ ನಿಮಗೆ ಏನೆನ್ನಿಸಿತು..?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...