alex Certify ʼಜಬ್ ವೀ ಮೆಟ್ʼ ಚಿತ್ರದ ಡೈಲಾಗ್ ಗೆ ಅಮೋಘವಾಗಿ ಅಭಿನಯಿಸಿದ ಪುಟ್ಟ ಪೋರಿ, ಮಿನಿ ಕರೀನಾ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಜಬ್ ವೀ ಮೆಟ್ʼ ಚಿತ್ರದ ಡೈಲಾಗ್ ಗೆ ಅಮೋಘವಾಗಿ ಅಭಿನಯಿಸಿದ ಪುಟ್ಟ ಪೋರಿ, ಮಿನಿ ಕರೀನಾ ಎಂದ ನೆಟ್ಟಿಗರು

‌ʼʼಬಚ್ಪನ್ ಸೆ ಹಿ ಮುಝೆ ಶಾದಿ ಕರ್ನೆ ಕಾ ಬಡಾ ಶೌಖ್ ಹೈ ಬೈ ಗಾಡ್ʼʼ, ʼಜಬ್ ವಿ ಮೆಟ್ʼ ಚಿತ್ರದಲ್ಲಿ ಕರೀನಾ ಕಪೂರ್ ನಿರ್ವಹಿಸಿದ ಗೀತ್ ಅವರ ಅಪ್ರತಿಮ ಬಬ್ಲಿ ಪಾತ್ರವನ್ನು ಸಿನಿ‌ ಪ್ರೇಮಿಗಳು ಇನ್ನು‌ ಮರೆತಿಲ್ಲ. ಇಮ್ತಿಯಾಜ್ ಅಲಿ ನಿರ್ದೇಶಿಸಿದ ಈ ಚಿತ್ರದಲ್ಲಿ ಶಾಹಿದ್ ಕಪೂರ್ ಸಹ ನಟಿಸಿದ್ದಾರೆ.

ಗೀತ್, ಕರೀನಾ ವೃತ್ತಿಜೀವನದ ಅತ್ಯುತ್ತಮ ಪಾತ್ರಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಈಗ ಇದೇ ಗೀತ್ ಪಾತ್ರವನ್ನ ಪುಟ್ಟ ಹುಡುಗಿಯೊಬ್ಬಳು ಮಿಮಿಕ್ ಮಾಡಿದ್ದಾಳೆ. ಅವಳ ಎಕ್ಸ್‌ಪ್ರೆಷನ್ಸ್ ಹಾಗೂ ಸಂಭಾಷಣೆಗಳಂತೂ ಎಲ್ಲರ ಮನಸ್ಸನ್ನು ಕದ್ದಿವೆ.

ಶಿವಾನಿ ಜೆ ಖನ್ನಾ ಎನ್ನುವವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಬ್ ವಿ ಮೆಟ್ ಚಿತ್ರದ ಅಪ್ಡೆಟೆಡ್ ಕ್ಲಿಪ್ ಹಂಚಿಕೊಳ್ಳಲಾಗಿದೆ. ಅಂದ್ರೆ, ಕಿಯಾರಾ ಖನ್ನಾ ಎನ್ನುವ ಪುಟ್ಟ ಮುದ್ದು ಹುಡುಗಿ ʼಜಬ್ ವಿ ಮೆಟ್‌ʼ ನ ಕರೀನಾ ಕಪೂರ್ ಅವರ ಸಂಭಾಷಣೆಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ.

ಕರೀನಾ ಪಾತ್ರಧಾರಿ ಗೀತ್ ಅವರು ಚಿತ್ರದ ಹೀರೋ ಆದಿತ್ಯ ಕಶ್ಯಪ್ ಅವರನ್ನು ದೆಹಲಿಯ ರೈಲಿನಲ್ಲಿ ಭೇಟಿಯಾದಾಗ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆಯ ಒಂದು ಕ್ಲಿಪ್ ಅನ್ನು ಕಿಯಾರಾ ಅಭಿನಯಿಸಿದ್ದಾರೆ‌. ಪುಟ್ಟ ಗೀತ್ ಳನ್ನು ನೋಡಿದ ನೆಟ್ಟಿಗರು ಈಕೆಯ ಅಭಿನಯಕ್ಕೆ ಮಾರು ಹೋಗಿದ್ದಾರೆ.

ಈ ವಿಡಿಯೋಗೆ 38,000 ಕ್ಕೂ ಹೆಚ್ಚು ಲೈಕ್ ಗಳು ಮತ್ತು ಸಾಕಷ್ಟು ಕಾಮೆಂಟ್ ಗಳು ವ್ಯಕ್ತವಾಗಿವೆ. ನೆಟಿಜನ್‌ಗಳು ಕಿಯಾರಾ ಅವರ ಅಭಿನಯವನ್ನು, ಆಕೆಯ ಟೈಮಿಂಗ್ ಹಾಗೂ ಎಕ್ಸ್‌ಪ್ರೆಷನ್ ಗಳನ್ನು ಇಷ್ಟಪಟ್ಟಿದ್ದಾರೆ. ಪುಟ್ಟ ಹುಡುಗಿಯ ಪ್ರತಿಭೆಯನ್ನ ಶ್ಲಾಘಿಸಿದ್ದಾರೆ. ಅಲ್ಲದೇ ಕಿಯಾರಾಳನ್ನ ಮಿನಿ ಕರೀನಾ ಎಂದು ಹೊಗಳಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...