alex Certify ನಿಮ್ಮ ಬಾಲ್ಯವನ್ನು ನೆನಪಿಸುತ್ತೆ ಪುಟ್ಟ ತಂಗಿಗೆ ಸೈಕಲ್‌ ಕಲಿಸುವ ಅಕ್ಕನ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಾಲ್ಯವನ್ನು ನೆನಪಿಸುತ್ತೆ ಪುಟ್ಟ ತಂಗಿಗೆ ಸೈಕಲ್‌ ಕಲಿಸುವ ಅಕ್ಕನ ವಿಡಿಯೋ…!

ಬಾಲ್ಯದ ನೆನಪುಗಳು, ಮಾಡಿದ ತುಂಟಾಟಗಳು, ಕಪಿಚೇಷ್ಟೆಗಳು, ಅಕ್ಕ-ತಂಗಿ, ಅಣ್ಣ-ತಮ್ಮಂದಿರು, ಗೆಳೆಯರ ಜತೆ ಕಳೆದ ನೆನಪುಗಳು ಮನಸ್ಸಿನ ಮೂಲೆಯಲ್ಲಿ ಆಗಾಗ ’ಸ್ಲೈಡ್‌ ಶೋ’ ನಡೆಸುತ್ತಿದ್ದರೆ ಮನಸ್ಸು ಪುಳಕಿತಗೊಳ್ಳುತ್ತದೆ. ಹಾಗೆಯೇ, ಯಾಕಾದರೂ ದೊಡ್ಡವರಾದೆವೋ ಎನಿಸುತ್ತದೆ.

ಆದರೂ, ಜೀವನ ಸಾಗುವಾಗ ನೆನಪಾಗುವ ಬಾಲ್ಯವು ಸುಮಧುರವಾಗಿರುತ್ತದೆ. ಇಂತ ಬಾಲ್ಯದ ಸುಮಧುರ ನೆನಪುಗಳಲ್ಲಿ ಸೈಕಲ್‌ ಕಲಿತಿದ್ದು ಪ್ರಮುಖವಾಗಿದೆ. ಬಾಲ್ಯದ ಇಂತಹ ಪ್ರಮುಖ ನೆನಪನ್ನು ಮರುಕಳಿಸುವ ವಿಡಿಯೋ ಒಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗಿದೆ.

ಗುಡ್‌ ನ್ಯೂಸ್‌ ಮೂವ್‌ಮೆಂಟ್‌ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ವಿಡಿಯೋ ಅಪ್‌ಲೋಡ್‌ ಮಾಡಲಾಗಿದ್ದು, ಪುಟ್ಟ ಬಾಲಕಿಯೊಬ್ಬಳು ತನ್ನ ತಂಗಿಗೆ ಸೈಕಲ್‌ ಕಲಿಸಿದ್ದಾಳೆ.

ತಂಗಿ ಸೈಕಲ್‌ ಹತ್ತಲು ತಾನೇ ಬಾಗಿ ಕುಳಿತ ಆಕೆಯ ಬೆನ್ನ ಮೇಲೆ ಕಾಲಿಟ್ಟು ತಂಗಿಯು ಸೈಕಲ್‌ ಹತ್ತಿದ್ದಾಳೆ. ಇದಾದ ಬಳಿಕ ತಂಗಿ ಸೈಕಲ್‌ ತುಳಿಯಲು ಮುಂದಾಗಿದ್ದು, ಅಕ್ಕನು ಹಿಂದಿನಿಂದ ಸೈಕಲ್‌ ಹಿಡಿದು ತಂಗಿ ಸೈಕಲ್‌ ಕಲಿಯಲು ನೆರವಾಗಿದ್ದಾಳೆ. ಈ ವಿಡಿಯೋ ಈಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಬಹುತೇಕ ಜನ ತಮ್ಮ ಬಾಲ್ಯವನ್ನೂ ನೆನಪಿಸಿಕೊಂಡಿದ್ದಾರೆ.

ವಿಡಿಯೋವನ್ನು ಸುಮಾರು 60 ಲಕ್ಷ ಜನ ವೀಕ್ಷಿಸಿದ್ದು, 13 ಲಕ್ಷ ಮಂದಿ ಲೈಕ್‌ ಮಾಡಿದ್ದಾರೆ. ಹಾಗೆಯೇ ಸಾವಿರಾರು ಜನ ಕಮೆಂಟ್‌ ಸಹ ಮಾಡಿದ್ದಾರೆ. ’ವಿಡಿಯೊವನ್ನು ನೋಡುವುದೇ ಸಂತಸದಾಯಕವಾಗಿದ್ದು, ನನಗೆ ತುಂಬ ಇಷ್ಟವಾಯಿತು’ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಮತ್ತೊಬ್ಬರು ’ಕ್ಯೂಟೆಸ್ಟ್‌ ಥಿಂಗ್‌’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಒಂದು ವಿಡಿಯೋ ಲಕ್ಷಾಂತರ ಜನರ ಮನ ಮುಟ್ಟಿದ್ದು, ಬಾಲ್ಯದ ನೆನಪುಗಳನ್ನು ಕಟ್ಟಿಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...