alex Certify ಆಂಧ್ರಪ್ರದೇಶ: ಮದ್ಯದಂಗಡಿಗಳು ಬೆಳಿಗ್ಗೆ ತೆರೆದಿದ್ದರೂ ಖರೀದಿಗೆ ಮುಂದಾಗದ ಮದ್ಯಪ್ರಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಧ್ರಪ್ರದೇಶ: ಮದ್ಯದಂಗಡಿಗಳು ಬೆಳಿಗ್ಗೆ ತೆರೆದಿದ್ದರೂ ಖರೀದಿಗೆ ಮುಂದಾಗದ ಮದ್ಯಪ್ರಿಯರು

ಕೋವಿಡ್​ 19 ನಿಯಂತ್ರಣಕ್ಕೆ ತರುವ ಸಲುವಾಗಿ ಆಂಧ್ರ ಪ್ರದೇಶದಲ್ಲಿ ಭಾಗಶಃ ಲಾಕ್​​ಡೌನ್ ಹೇರಿಕೆ ಮಾಡಿದ ಬಳಿಕ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ ಎಂದು ವರದಿಯಾಗಿದೆ.

ಏಪ್ರಿಲ್​ಗೆ ಹೋಲಿಕೆ ಮಾಡಿದ್ರೆ ಮೇ ತಿಂಗಳಲ್ಲಿ ಮದ್ಯ ಮಾರಾಟದಲ್ಲಿ 9.74 ಪ್ರತಿಶತ ಕುಸಿತ ಕಂಡು ಬಂದಿದೆ. ಏಪ್ರಿಲ್​ ತಿಂಗಳಲ್ಲಿ ಇದ್ದಂತೆಯೇ ಮೇ ತಿಂಗಳಿನಲ್ಲೂ ಲಿಕ್ಕರ್​ ಶಾಪ್​ಗಳು, ಬಾರ್​ ಹಾಗೂ ರೆಸ್ಟಾರೆಂಟ್​ಗಳಲ್ಲಿ ಆರು ಗಂಟೆಗಳ ಕಾಲ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೂ ಸಹ ಮೇ ತಿಂಗಳಲ್ಲಿ ಮದ್ಯ ಮಾರಾಟದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.

ಬಾರ್​​ಗಳು ಹಾಗೂ ರೆಸ್ಟಾರೆಂಟ್​ಗಳಲ್ಲಿನ ಮಂದಗತಿಯ ವ್ಯಾಪಾರದಿಂದಾಗಿ ಆರ್ಥಿಕ ಸ್ಥಿತಿ ಕುಂಠಿತವಾಗಲಿದೆ ಅನ್ನೋದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಭಾಗಶಃ ಲಾಕ್​ಡೌನ್​ ಜಾರಿಗೆ ತಂದಾಗಲೇ ಮದ್ಯಮಾರಾಟದ ಉದ್ಯಮದಲ್ಲಿ ಕುಂಠಿತವಾಗಬಹುದು ಎಂದು ಅಂದಾಜಿಸಲಾಗಿತ್ತು. ಕೋವಿಡ್​ ಹರಡುವ ಭಯ ಒಂದು ಕಾರಣವಾದ್ರೆ ಮದ್ಯವನ್ನ ಖರೀದಿ ಮಾಡಲು ಗ್ರಾಹಕರು ಸಂಜೆ ಸಮಯವನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ತಾರೆ.

ಆದರೆ ಈಗ ಬೆಳಗಿನ ಜಾವ ಮಾತ್ರ ಬಾರ್​ಗಳು ತೆರೆದಿರೋದ್ರಿಂದ ಬೆಳಗ್ಗೆ ಹೊತ್ತು ಬಾರ್​ ಕಡೆ ಮುಖ ಮಾಡುವವರ ಸಂಖ್ಯೆ ತುಂಬಾನೇ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್​ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ 1863.35 ಕೋಟಿ ರೂ. ಮದ್ಯ ಮಾರಾಟವಾಗಿದ್ದರೆ ಮೇ ತಿಂಗಳಲ್ಲಿ 1686.32 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...