alex Certify ಗಮನಿಸಿ: ಬಿಜೆಪಿಯಿಂದ ಮೊಬೈಲ್ ಗೆ 3 ತಿಂಗಳು ಉಚಿತ ರೀಚಾರ್ಜ್; ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಹೀಗೊಂದು ಸುಳ್ಳು ಸುದ್ದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಬಿಜೆಪಿಯಿಂದ ಮೊಬೈಲ್ ಗೆ 3 ತಿಂಗಳು ಉಚಿತ ರೀಚಾರ್ಜ್; ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಹೀಗೊಂದು ಸುಳ್ಳು ಸುದ್ದಿ…!

2024ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಜನರು ಬಿಜೆಪಿಗೆ ಮತ ಹಾಕಲು, ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಏರ್ ಟೆಲ್, BSNL, ಜಿಯೋ, ವಿಐ ಸೇರಿ ಎಲ್ಲಾ ಭಾರತೀಯ ಮೊಬೈಲ್ ಬಳಕೆದಾರರಿಗೆ ಮೂರು ತಿಂಗಳ ಕಾಲ ಮೊಬೈಲ್ ಗೆ ಉಚಿತ ರೀಚಾರ್ಜ್ ಯೋಜನೆ ಕಲ್ಪಿಸಿದ್ದಾರೆ.

ಮೂರು ತಿಂಗಳ ರೀಚಾರ್ಜ್ ಸೌಲಭ್ಯ ಪಡೆಯಲು ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ. ಅಕ್ಟೋಬರ್ 31 ಕೊನೆಯ ದಿನವಾಗಿದ್ದು, ಅಷ್ಟರೊಳಗೆ ಲಿಂಕ್ ಕ್ಲಿಕ್ ಮಾಡಿ ಪ್ರಯೋಜನ ಪಡೆಯಿರಿ ಎನ್ನುವ ಲಿಂಕ್ ಕಳುಹಿಸಲಾಗುತ್ತಿದೆ.

ಇದರ ಸತ್ಯಾಸತ್ಯತೆಯನ್ನು ತಿಳಿಯದ ಅನೇಕರು ಫಾರ್ವರ್ಡ್ ಮಾಡುತ್ತಿದ್ದಾರೆ. ಲಿಂಕ್ ಕ್ಲಿಕ್ ಮಾಡಿ ಬೇಸ್ತು ಬೀಳುತ್ತಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ನಂತರ ಮೊಬೈಲ್ ನಂಬರ್ ಪಡೆದುಕೊಂಡು ಇದನ್ನು 10 ಜನರಿಗೆ ಶೇರ್ ಮಾಡಿ ಎಂದೆಲ್ಲಾ ಹೇಳಲಾಗುತ್ತಿದೆ.

ಅಂದಹಾಗೆ ಇದೆಲ್ಲಾ ಸುಳ್ಳು ಸುದ್ದಿ. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹೆಸರಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿವೆ. ಸರ್ಕಾರದಿಂದ ಇಂತಹ ಯಾವುದೇ ರೀಚಾರ್ಜ್ ಯೋಜನೆಗಳನ್ನು ಜಾರಿ ಮಾಡಿಲ್ಲ. ಇಂತಹ ಯಾವುದೇ ಸಂದೇಶ, ಲಿಂಕ್ ಬಂದಲ್ಲಿ ಕ್ಲಿಕ್, ಫಾರ್ವರ್ಡ್ ಮಾಡದೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...