ಹೊಸ ವರ್ಷಕ್ಕೆ ಭರ್ಜರಿ ಆರಂಭ ಕಂಡಿರುವ ಟಿವಿಎಸ್ ತನ್ನ ಸೀಮಿತ ಎಡಿಶನ್ನ ಅಪಾಚೆ ಆರ್ಟಿಆರ್ 165 ಆರ್ಪಿ ಬೈಕ್ ಸೋಲ್ಡ್ ಔಟ್ ಆಗುವುದಕ್ಕೆ ಸಾಕ್ಷಿಯಾಗಿದೆ.
ಟ್ವಿಟರ್ನಲ್ಲಿ ತನ್ನ ಅಧಿಕೃತ ಹ್ಯಾಂಡಲ್ ಮೂಲಕ ಟಿವಿಎಸ್ ಈ ವಿಚಾರ ಘೋಷಿಸಿದೆ. “ಸೀಮಿತ ಎಡಿಶನ್ನ ಟಿವಿಎಸ್ ಅಪಾಚೆ ಆರ್ಟಿಆರ್ 165 ಅದಾಗಲೇ ಸೋಲ್ಡ್ ಔಟ್ ಆಗಿದೆ. ಪ್ರತಿಯೊಬ್ಬ ಅಪಾಚೆಯನ್ಗೂ ಈ ರೇಸ್ ಮಷಿನ್ ಮೇಲೆ ಆಸಕ್ತಿ ಇಟ್ಟಿದ್ದಕ್ಕೆ ಧನ್ಯವಾದ ತಿಳಿಸುತ್ತೇವೆ – ಮತ್ತು ಮಿಸ್ ಮಾಡಿಕೊಂಡವರಿಗೆ, ಆರ್ಪಿ ಸರಣಿ ಭವಿಷ್ಯದಲ್ಲಿ ಹೊಸ ರೇಸ್ ಮಷಿನ್ನೊಂದಿಗೆ ಮರಳಲಿದೆ,” ಎಂದು ಟಿವಿಎಸ್ ಅಪಾಚೆ ಸೀರೀಸ್ ಹೇಳಿಕೊಂಡಿದೆ.
ಶೀಘ್ರವೇ ಈ ಐದು ಬೈಕ್ ಗಳು ಭಾರತದ ಮಾರುಕಟ್ಟೆಗೆ ಲಗ್ಗೆ
ರೇಸ್ ಪರ್ಫಾರ್ಮೆನ್ಸ್ ಸರಣಿಯಡಿ ಬಿಡುಗಡೆ ಮಾಡಲಾದ ಮೊದಲ ಬೈಕ್ ಆಗಿರುವ ಟಿವಿಎಸ್ ಅಪಾಚೆ ಆರ್ಟಿಆರ್ 165ಆರ್ಪಿಯ 200 ಘಟಕಗಳನ್ನು ಮಾತ್ರವೇ ಲಾಂಚ್ ಮಾಡಲಾಗಿತ್ತು. ಈ ಬೈಕ್ನ ಎಕ್ಸ್ಶೋರೂಂ ಬೆಲೆ 1.45 ಲಕ್ಷ ರೂ.ಗಳು.
ಬೈಕ್ನಲ್ಲಿರುವ 165 ಸಿಸಿ ಇಂಜಿನ್ನಲ್ಲಿ 19.2 ಪಿಎಸ್ ಶಕ್ತಿ 10,000 ಆರ್ಪಿಎಂನಲ್ಲಿ ಉತ್ಪಾದನೆಯಾಗುತ್ತದೆ. ಅಪಾಚೆ ಆರ್ಟಿಆರ್ನ ಬಿಎಸ್6 ಮಾಡೆಲ್ಗಳಿಗೆ ಆರ್ಟಿ-ಎಫ್ಐ ತಂತ್ರಜ್ಞಾನದ ಬಲ ನೀಡಲಾಗಿದೆ. ಈ ಮಾಡೆಲ್ಗಳಲ್ಲಿ ಕಾರ್ಬೂರೇಟರ್ನಿಂದ ಇಂಧನದ ಇಂಜೆಕ್ಷನ್ವರೆಗೂ ಮಾರ್ಪಾಡು ಮಾಡಲಾಗಿದೆ.